ಅಪಘಾತದ ಸ್ಥಳ 
ರಾಜ್ಯ

ಬೆಂಗಳೂರಿನ ಹೊರವಲಯದಲ್ಲಿ ಮೂರು ವಾಹನಗಳ ನಡುವೆ ಭೀಕರ ಅಪಘಾತ; 7 ಮಂದಿ ಸಾವು | Accident

ಬೆಂಗಳೂರು: ನಗರದ ಹೊರವಲಯ ಹೊಸಕೋಟೆ-ದೇವನಹಳ್ಳಿ ಹೆದ್ದಾರಿಯಲ್ಲಿ ಇಂದು(ಫೆ. 13) ಭೀಕರ ಮೂರು ವಾಹನಗಳ ನಡುವೆ ಭೀಕರ ಅಪಘಾತ(Accident) ಸಂಭವಿಸಿದ್ದು, ಘಟನೆಯಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹೊಸಕೋಟೆ ತಾಲೂಕಿನ ಎಂ.ಸತ್ಯವಾರ ಗ್ರಾಮದ ಬಳಿಕ ಅಪಘಾತ ಸಂಭವಿಸಿದೆ.  ಎಸ್‌ಯುವಿ ಕಾರು ಮೊದಲು ಚಾಲಕನ ನಿಯಂತ್ರಣ ಕಳೆದುಕೊಂಡು, ಬೈಕ್​ಗೆ ಡಿಕ್ಕಿ ಹೊಡೆದಿದೆ. ಬಳಿಕ ಟ್ರಕ್​ಗೆ ಗುದ್ದಿದೆ. ಎಸ್​ಯುವಿನಲ್ಲಿ ಪ್ರಯಾಣಸುತ್ತಿದ್ದ ಆರು ಮಂದಿ ಮತ್ತು ಬೈಕ್​ನಲ್ಲಿ ತೆರಳುತ್ತಿದ್ದ ಒಬ್ಬರು ಸಾವನ್ನಪ್ಪಿದ್ದಾರೆ.   
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬೆಂಗಳೂರು ಗ್ರಾಮಾಂತರ ಪೊಲೀಸರು ಕಾರಿನಲ್ಲಿ ಸಿಲುಕಿದ್ದ ಶವವಗಳನ್ನು ಹೊರ ತೆಗೆದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.  
ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸರು, ಮೃತರ ಗುರುತುಗಳನ್ನು ಪರಿಶೀಲಿಸಿದ್ದು, ಅವರೆಲ್ಲರೂ ಕೊತ್ತನೂರಿನ ನಿವಾಸಿಗಳಾಗಿದ್ದಾರೆ. ದೇವನಹಳ್ಳಿ ಕಡೆಗೆ ಹೋಗುತ್ತಿದ್ದರು. ದ್ವಿಚಕ್ರ ವಾಹನ ಸವಾರನ ವಿವರಗಳನ್ನು ಸಹ ಪಡೆಯಲಾಗುತ್ತಿದೆ. ಎಸ್‌ಯುವಿ ಚಾಲಕನ ಅತಿ ವೇಗವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.