ತೊರ್ನಹಳ್ಳಿಯಲ್ಲಿ 60ನೇ ಹೂವಿನ ಕರಗ ಸಂಪನ್ನ Festival
ಮಡಿವಾಳ: ಮಾಲೂರು ತಾಲೂಕು ತೊರ್ನಹಳ್ಳಿಯಲ್ಲಿ ಶ್ರೀ ದ್ರೌಪದಾಂಬಾದೇವಿ ಹಾಗೂ ಶ್ರೀ ಧರ್ಮರಾಯ ಸ್ವಾಮಿಯ 60ನೇ ಹೂವಿನ ಕರಗ ಮಹೋತ್ಸವ ಭಾನುವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.Festival
ಕರಗದ ಪೂಜಾರಿ ಮಾರೇಶ್ ಕರಗ ಹೊತ್ತು ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಗಮನ ಸೆಳೆದರು. ಭಾನುವಾರ ಮಧ್ಯರಾತ್ರಿ ಕರಗದ ಶಕ್ತ್ಯೋತ್ಸವಕ್ಕೆ ಸಾವಿರಾರು ಮಂದಿ ಸಾಯಾರು. ನೂರಾರು ವೀರಕುಮಾರರು ಕತ್ತಿಗಳನ್ನು ಹಿಡಿದು ಗೋವಿಂದಾ... ಗೋವಿಂದಾ... ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.
ತೊರ್ನಹಳ್ಳಿ, ಬಂಡೆಗುಡಿಸಲು ಗ್ರಾಮದಲ್ಲಿ ಸಂಚರಿಸಿದ ಕರಗ ಎಲ್ಲ ದೇವಾಲಯಗಳು, ದರ್ಗಾಗಳಲ್ಲಿ ಪೂಜೆ ಸ್ವೀಕರಿಸಿತು. ಸೋಮವಾರ ಬೆಳಗ್ಗೆ ದೇವಸ್ಥಾನ ತಲುಪುವುದರೊಂದಿಗೆ ಸಂಪನ್ನಗೊಂಡಿತು. ಮಾಲೂರು ಶಾಸಕಕೆ.ವೈ. ನಂಜೇಗೌಡ ಪಾಲ್ಗೊಂಡಿದ್ದರು. ಸಂಜೀವಿನಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಹೂಡಿ ವಿಜಯ್ ಕುಮಾರ್,ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.
ಶ್ರೀ ಸಲಾಂಬಾ ದೇವಾಲಯದ ಬಳಿ ಉಮ್ಮಲು ಗ್ರಾಪಂ ಮಾಜಿ ಅಧ್ಯಕ್ಷ ಯು.ಆರ್.ರಮೇಶ್ ಹಾಗೂ ಚಿಕ್ಕನಲ್ಲಾಳ ತಿಮ್ಮರಾಯಪ್ಪ ಅವರು ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ಕರಗ ಮಹೋತ್ಸವ ಹಿನ್ನೆಲೆ ಗ್ರಾಮದಲ್ಲೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಶ್ರೀ ಧರ್ಮರಾಯ ಸ್ವಾಮಿ, ಶ್ರೀ ಭೀಮೇಶ್ವರ ಸ್ವಾಮಿ, ಶ್ರೀ ಮಹರ್ಷಿ ವಾಲ್ಮೀಕಿ, ಶ್ರೀ ಸಪಲಮ್ಮದೇವಿ, ಶ್ರೀ ಮುನೇಶ್ವರ ಸ್ವಾಮಿ, ಶ್ರೀ ಯಲ್ಲಮ್ಮದೇವಿ, ಶ್ರೀ ದೊಡ್ಡಮ್ಮದೇವಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಗಂಗಮ್ಮ ದೇವಿ, ಶ್ರೀ ಮಾರಿಕಾಂಬಾ ದೇವಿ, ಶ್ರೀ ಭುವನೇಶ್ವರಿದೇವಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.
ದೇವಾಲಯ ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ, ಕುಲದ ದೊಡ್ಡಗೌಡಮುನಿಯಪ್ಪ, ಟಿ.ಆರ್.ರಮೇಶ್ ಬಾಬು, ಟಿ.ಸಿ.ಶ್ರೀನಿವಾಸ್, ಗೌಡರ ನಾರಾಯಣಪ್ಪನವರ ಮಕ್ಕಳು, ತಾತಪ್ಪ, ನಾರಾಯಣಪ್ಪ, ರಾಜಣ್ಣ, ಶ್ರೀ ಧರ್ಮರಾಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎಂ.ರೋಜಾ ರಾಜಪ್ಪ, ಕಾರ್ಯದರ್ಶಿ ಮತ್ತು ಖಜಾಂಚಿ ಎಸ್.ರಾಮಪ್ಪ, ಸದಸ್ಯರಾದ ಲಕ್ಷ್ಮಯ್ಯ, ಬಿಎಂಎಸ್ ಶ್ರೀನಿವಾಸ್, ಪಿ.ಪ್ರಕಾಶ್, ಟಿ.ಎಂ.ಶ್ರೀನಿವಾಸ್, ಟಿ.ಎಲ್. ಚಂದ್ರಶೇಖರ್, ಪಿ.ರಾಮಕೃಷ್ಣ, ಟಿ.ಎಂ ಗುಂಡಪ್ಪ, ಎಂ.ಮಂಜುನಾಥ್, ಟಿ.ಸಿ.ಕೃಷ್ಣಪ್ಪ, ಕೃಷ್ಣಪ್ಪ,ಟಿ.ಸಿ.ನಾರಾಯಣಪ್ಪ, ಟಿ.ಪಿ.ರಾಜಣ್ಣ, ತಾತೆಪ್ಪ, ನಾರಾಯಣಪ್ಪ, ಎಸ್.ರಾಮಪ್ಪ, ಶಂಕರಪ್ಪ, ಚಿನ್ನಪ್ಪ, ಟಿಎಂಎಸ್. ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಕೆ.ಮುನಿಶಾಮಪ್ಪ ಹಾಗೂ ಕುಲದ ಗೌಡರು, ಯಜಮಾನರು ಇದ್ದರು.
ತೊರ್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ, ಬಂಡೆಗುಡಿಸಲು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಇದ್ದರು.