ಮುನವಳ್ಳಿ ಪುರಸಭೆಯಲ್ಲಿ 2026&27ನೇ ಸಾಲಿನ ಬಜೆಟ್ಗೆ ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಉಪಾಧ್ಯ ಡಿ.ಡಿ.ಕಿನ್ನೂರಿ ಹಾಗೂ ಸದಸ್ಯರು ಅನುಮೋದನೆ ನೀಡಿದರು. ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಇತರರಿದ್ದರು.
ಮುನವಳ್ಳಿ: ಪಟ್ಟಣದ ಪುರಸಭೆಯಲ್ಲಿ 2026&27ನೇ ಸಾಲಿಗೆ 4.05 ಲ ರೂ. ಮೊತ್ತದ ಉಳಿತಾಯ ಬಜೆಟ್ಗೆ ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಸರ್ವ ಸದಸ್ಯರು ಮಂಗಳವಾರ ಅನುಮೋದನೆ ನೀಡಿದರು.
2026&27ನೇ ಸಾಲಿನಲ್ಲಿ 16.22 ಕೋಟಿ ರೂ. ಜಮೆ ಹಾಗೂ 16.18 ಕೋಟಿ ರೂ. ಖರ್ಚು ಇದರಲ್ಲಿ
ಎಸ್ಎ್ಸಿ ಮುಕ್ತನಿಧಿಯಡಿ ರಸ್ತೆ ಕಾಮಗಾರಿ 7 ಲಕ್ಷ ರೂ., ಚರಂಡಿ ಕಾಮಗಾರಿಗೆ 75 ಲಕ್ಷ ರೂ., ನೀರು ಸರಬರಾಜು ನಿರ್ವಹಣೆಗೆ 45 ಲಕ್ಷ ರೂ., ಬೀದಿದೀಪ ನಿರ್ವಹಣೆಗೆ 10 ಲ ರೂ., ನತ್ಯಾಜ್ಯ ನಿರ್ವಹಣೆಗೆ 50 ಲಕ್ಷ ರೂ., ಕೌನ್ಸಿಲ್ ವೆಚ್ಚ 89 ಲಕ್ಷ ರೂ., ಕಟ್ಟಡ ದುರಸ್ತಿಗೆ 45 ಲಕ್ಷ ರೂ. ಹಾಗೂ ಇತರ ಖರ್ಚಿಗೆ
5 ಲಕ್ಷ ರೂ. ಸೇರಿ ಇನ್ನಿತರ ಅಂದಾಜು ವೆಚ್ಚಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಪುರಸಭೆ ಸದಸ್ಯ ಸುಭಾಸ ಗಿದಿಗೌಡ್ರ, ಶ್ರೀಕಾಂತ ಮಲಗೌಡ್ರ ಮಾತನಾಡಿ, ಪಟ್ಟಣದ ವಿವಿಧ
ವಾರ್ಡ್ಗಳ ಅಭಿವೃದ್ಧಿ ಕಾಮಗಾರಿ ಕುರಿತು ಚರ್ಚಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಪುರಸಭೆ ಅಧ್ಯ ಈಶ್ವರ ಕರಿಕಟ್ಟಿ, ಉಪಾಧ್ಯ ಡಿ.ಡಿ.ಕಿನ್ನೂರಿ, ಸದಸ್ಯರಾದ ಮೀರಾಸಾಬ್ ವಟ್ನಾಳ, ಸುಭಾಸಗೌಡ ಗಿದಿಗೌಡ್ರ, ಶ್ರೀಕಾಂತ ಮಲಗೌಡ್ರ, ಗುರುಶಾಂತ ಚಂದರಗಿ, ಸಿ.ಬಿ.ಬಾಳಿ, ಶ್ರೀಶೈಲ ನೇಗಿನಾಳ, ಸಮೀವುಲ್ಲಾ ಚೂರಿಖಾನ್, ಬಸವರಾಜ ದೊಡ್ಡಮನಿ, ಶೀತಲ್ ಗೋಮಾಡಿ, ಲಲಿತಾ ರೇವಡಗಿ,
ರೇವತಿ ಬಾರಕೇರ, ಬಸವರಾಜ ದೊಡ್ಡಮನಿ, ಸಲೀಂಮಲ್ಲಿಕ್ ಬೆಳವಡಿ, ಕೆ.ಎಚ್.ಹಿರೇಮೇತ್ರಿ, ಶಂಕ್ರವ್ವ ಗೋಕಾಕ, ಎಚ್.ಕೆ.ದನದಮನಿ, ಕಸ್ತೂರಿ ಗಂಗಣ್ಣವರ, ಪುರಸಭೆ ಮುಖ್ಯಾಧಿಕಾರಿ
ಎಂ.ಎಂ.ತಿಮ್ಮಾಣಿ, ಕಂದಾಯ ಅಧಿಕಾರಿ
ಅನಿಲ ಗಿಡ್ನಂದಿ ಇತರರಿದ್ದರು.