ಶಿಂಧೋಗಿ ಗ್ರಾಮದ ಲೋಕೇಶ್ವರಿ ಪಿಕೆಪಿಎಸ್ ಸಭಾಭವನದಲ್ಲಿ ರೈತರಿಗೆ ವಿರೂಪಾಕ್ಷ ಮಾಮನಿ ಹಾಗೂ ಶ್ರೀಗಳು ಸಾಲಪತ್ರ ವಿತರಿಸಿದರು. ಮುಕ್ತಾನಂದ ಸ್ವಾಮೀಜಿ, ಮಡಿವಾಳಯ್ಯಸ್ವಾಮಿ ಹಿರೇಮಠ, ಅನಿಲರಾವ್ ಕದಂ, ವಿ.ಎಚ್. ಪಾಟೀಲ ಇತರರಿದ್ದರು.
ಬಿಡಿಸಿಸಿ ಬ್ಯಾಂಕ್ನಿಂದ ಲೋಕೇಶ್ವರಿ ಪಿಕೆಪಿಎಸ್ಗೆ 1.80 ಕೋಟಿ ರೂ. ಹೆಚ್ಚುವರಿ ಸಾಲ ಸೇರಿದಂತೆ ಒಟ್ಟು 4.80 ಕೋಟಿ ರೂ. ಒದಗಿಸಲಾಗಿದೆ. ಒಟ್ಟು 432 ರೈತ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ರೈತರು ಪ್ರಯೋಜನ ಪಡೆದು ಸಕಾಲಕ್ಕೆ ಸಾಲ ಮರುಪಾವತಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾ ಮಾಮನಿ ಹೇಳಿದರು.
ಶಿಂಧೋಗಿ ಗ್ರಾಮದ ಲೋಕೇಶ್ವರಿ ಪಿಕೆಪಿಎಸ್ ಸಭಾಭವನದಲ್ಲಿ ಸೋಮವಾರ ರೈತರಿಗೆ ಸಾಲ ಪತ್ರ ವಿತರಿಸಿ ಮಾತನಾಡಿದರು.
ಸಂದ ಮಾಜಿ ಅಧ್ಯ ವಿ.ಎಚ್.ಪಾಟೀಲ ಹಾಗೂ ಮುಖಂಡ ಜಗದೀಶ ಕೌಜಗೇರಿ ಮಾತನಾಡಿ, ತಾಲೂಕಿನಲ್ಲಿ ಸಹಕಾರ ಸಂಗಳ ಅಭಿವೃದ್ಧಿಗೆ ಮಾಮನಿ ಮನೆತನ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಸ್ಥಳಿಯ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಪರಸ್ಪರ ಒಗ್ಗಟ್ಟು ಹಾಗೂ ಸಹಕಾರವಿಲ್ಲದಿದ್ದರೆ ಅಭಿವೃದ್ಧಿ ಕಷ್ಟಸಾಧ್ಯ ಎಂದರು.
ಸಂಸ್ಥೆ ಅಧ್ಯ ಅನಿಲರಾವ್ ಕದಂ ಮಾತನಾಡಿದರು. ಈರಯ್ಯಸ್ವಾಮಿ ಹಿರೇಮಠ, ಮಡಿವಾಳಯ್ಯಸ್ವಾಮಿ ಹಿರೇಮಠ, ಸಹಕಾರ ಸಂಗಳ ತಾಲೂಕು ನಿಯಂತ್ರಣಾಧಿಕಾರಿ ಸಿ.ಕೆ.ಕೋರಿ, ಬ್ಯಾಂಕ್ ನಿರೀಕ್ಷಕರಾದ ಎಸ್.ಎಸ್.ಸಿದ್ದನ್ನವರ, ಮಹಾಂತೇಶ ಬಡಿಗೇರ, ಸಂದ ಉಪಾಧ್ಯ ಮಾರುತಿ ಕಾತ್ರಾಳ, ನಿರ್ದೇಶಕರಾದ ಯಲ್ಲಪ್ಪ ಪಾಂಡ್ರೆ, ಮಹಾಂತೇಶ ಕುರಬಗಟ್ಟಿ,
ಎಚ್.ಆರ್.ತೋರಣಗಟ್ಟಿ, ಮದನರಾವ್ ಶಿಂಧೆ, ಉಮೇಶ ನಡನಳ್ಳಿ, ಗಂಗವ್ವ ಅಡವಿ, ತುಳಸವ್ವ ಕ್ಯಾಮಣ್ಣವರ, ಶಿವಾನಂದ ಭಜಂತ್ರಿ, ಮಹಾದೇವಪ್ಪ ತಳವಾರ, ಮುಖ್ಯ ಕಾರ್ಯನಿರ್ವಾಹಕ ಬಸಪ್ಪ ಐನಾಪುರ, ಆಕಾಶ ನಡನಳ್ಳಿ, ಪ್ರಕಾಶ ನಂದಿ ಹಾಗೂ ಜಿ.ಬಿ.ಕುರಬಗಟ್ಟಿ, ಬಿ.ಕೆ.ನಿಕ್ಕಂ, ಶೇಖರ ಗೋಕಾವಿ, ಮಹಾಂತೇಶ ಯಕ್ಕೇರಿ, ಪರಶುರಾಮ ಗಂಟಿ, ಜಿ.ಎನ್.ಅಲಮನ್ನವರ, ಎ.ವಿ.ನರಗುಂದ ಇತರರಿದ್ದರು.