ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಕೊಡೇಕಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು. 
ರಾಜ್ಯ

ಹೊರಟ್ಟಿಯ 40 ಮಕ್ಕಳಲ್ಲಿ ತೀವ್ರಜ್ವರ

ಪ್ರಮುಖ ಮುಖ್ಯಾಂಶಗಳು

  • ಕೊಡೇಕಲ್​ ಪಿಎಚ್​ಸಿಗೆ ದಾಖಲು
  • ಲ್ಯಾಬ್​ಗೆ ರಕ್ತದ ಮಾದರಿ ರವಾನೆ ಹೊರಟ್ಟಿಯ 40 ಮಕ್ಕಳಲ್ಲಿ ತೀವ್ರಜ್ವರ
ಯಾದಗಿರಿ: ಹುಣಸಗಿ ತಾಲೂಕಿನ ಹೊರಟ್ಟಿ ಗ್ರಾಮದ 40 ಮಕ್ಕಳಲ್ಲಿ ಶನಿವಾರ ತೀವ್ರ ಜ್ವರದ ಲಣ ಕಾಣಿಸಿಕೊಂಡಿದೆ.
ಗ್ರಾಮದ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನವೇ ಕೆಲ ವಿದ್ಯಾರ್ಥಿಗಳಲ್ಲಿ ಜ್ವರದ ಲಣ ಕಾಣಿಸುತ್ತಲೇ ಮುಖ್ಯಗುರು ಮಲ್ಲಿಕಾರ್ಜುನ ಅವರು ಮನೆಗೆ ಕಳುಹಿಸಿದರು. ಶನಿವಾರವೂ ಹಲವು ಮಕ್ಕಳಲ್ಲಿ ಜ್ವರ ತೀವ್ರಗೊಂಡಿದ್ದರಿಂದ ಕೊಡೇಕಲ್​ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 20 ಮಕ್ಕಳಿಗೆ ಹೊರರೋಗಿ ವಿಭಾಗದಲ್ಲಿ (ಒಪಿಡಿ) ಚಿಕಿತ್ಸೆ ನೀಡಲಾಗುತ್ತಿದ್ದು, ನಾಲ್ವರನ್ನು ದಾಖಲಿಸಲಾಗಿದೆ. ಉಳಿದ ಮಕ್ಕಳು ಮನೆಗೆ ತೆರಳಿದ್ದು, ಆರೋಗ್ಯ ಸ್ಥಿತಿ ಮೇಲೆ ವೈದ್ಯರು ನಿಗಾ ಇರಿಸಿದ್ದಾರೆ.
ವಿಷಯ ತಿಳಿಯುತ್ತಲೇ ಆಸ್ಪತ್ರೆಗೆ ದೌಡಾಯಿಸಿದ ಸುರಪುರ ಟಿಎಚ್​ಒ ಡಾ.ವೆಂಕಟಪ್ಪ ನಾಯಕ, ಜ್ವರಪೀಡಿತ 18 ಮಕ್ಕಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು, ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಆತಂಕಪಡುವ ಅಗತ್ಯವಿಲ್ಲ. ೇತ್ರ ಶಿಣಾಧಿಕಾರಿ ಲಿಂಗರಾಜ ಮೂಲಿಮನಿ ಸಹ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಆರೋಗ್ಯದ ಕಡೆ ಗಮನಹರಿಸಿ
ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ) ಆರೋಗ್ಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಅಗತ್ಯ ಔಷಧ ಮತ್ತು ವೈದ್ಯಕಿಯ ಸೌಲಭ್ಯ ಒದಗಿಸಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ವೈದ್ಯಾಧಿಕಾರಿಗಳಿಗೆ ಹೇಳಿದ್ದಾರೆ. ಜ್ವರದ ಪ್ರಕರಣ ಹೆಚ್ಚಾಗಿ ಕಂಡುಬಂದಿದ್ದರಿಂದ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛತೆ, ಕುಡಿಯುವ ನೀರಿನ ಗುಣಮಟ್ಟ ಮತ್ತು ಸಾಂಕ್ರಾಮಿಕ ರೋಗದ ಕುರಿತು ಪರಿಶೀಲಿಸಲು ತಿಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.