ದಿನ್ನಹಳ್ಳಿಯ ರಾಮಕೋಟಿ ಭಜನೆಗೆ 39 ವಸಂತ Ramakoti Bhajan 
ರಾಜ್ಯ

ದಿನ್ನಹಳ್ಳಿಯ ರಾಮಕೋಟಿ ಭಜನೆಗೆ 39 ವಸಂತ Ramakoti Bhajan

ಮುಳಬಾಗಿಲು: ವಿದೇಶಿ ಸಂಸ್ಕೃತಿ, ಪರಂಪರೆಗಳು ಹಳ್ಳಿ ಹಾಗೂ ಗಲ್ಲಿಗಳನ್ನು ತಲುಪಿದ್ದರೂ ಸಹ ನಮ್ಮ ದೇಶಿಯ ಸಂಸ್ಕೃತಿ, ಪರಂಪರೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಈ ಕಾಲ ಟ್ಟದಲ್ಲೂ ಕಾಣಬಹುದು.
ಎಐ ಕಾಲಘಟ್ಟದಲ್ಲಿ ಯಾವುದಾದರೂ ಕಾರ್ಯಕ್ರಮ ಆಯೋಜನೆ ಮಾಡಿದರೆ ಅಲ್ಲಿ ಆರ್ಕೆಸ್ಟ್ರಾ, ಅಶ್ಲೀಲ ನೃತ್ಯವನ್ನು ಆಯೋಜನೆ ಮಾಡಿ ಲಾಭ ಗಿಟ್ಟಿಸಿಕೊಳ್ಳುವವರೇ ಹೆಚ್ಚು.Ramakoti Bhajan
ಇದರ ಮಧ್ಯೆ ಕಳೆದ 39 ವರ್ಷದಿಂದ ಯುಗಾದಿ ವೇಳೆ ಸತತ 8 ದಿನ ಅಹೋರಾತ್ರಿ ರಾಮಕೋಟಿ ಭಜನೆ ಆಯೋಜನೆ ಮಾಡುವ ಮೂಲಕ ಹೆಸರು ಸಂಸ್ಕೃತಿ-ಸಂಪ್ರದಾಯಗಳನ್ನು ಜೀವಂತವಾಗಿಸಿಕೊಂಡ ತಾಲೂಕಿನ ದಿನ್ನಹಳ್ಳಿಯ ಜನ ಮಾದರಿಯಾಗಿದ್ದಾರೆ.
ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಮುಂಭಾಗದ ಭಜನೆ ಮಂದಿರದಲ್ಲಿ ಮಾ.7ರಂದು ಶ್ರೀ ಸೀತಾ ಶ್ರೀರಾಮದೇವರ ಪಟ್ಟಾಭಿಷೇಕದ ಭಾವಚಿತ್ರ ಪ್ರತಿಷ್ಠಾಪನೆ ಮೂಲಕ ಆರಂಭವಾದ ಅಖಂಡ ದೀಪಾರಾಧನೆ, ಕಲಶ ಪ್ರತಿಷ್ಠಾಪನೆ, ರಾಮ ಭಜನೆ ಮಾ.15ರಂದು ಸಂಪನ್ನವಾಯಿತು. 8 ದಿನವೂ ಗ್ರಾಮದಲ್ಲಿ ಮದ್ಯ,ವಾಂಸ ಮತ್ತಿತರ ಚಟುವಟಿಕೆಗಳಿಗೆ ಸ್ವಯಂಪ್ರೇರಣೆಯ ನಿರ್ಬಂಧವಿರುತ್ತದೆ. ಗ್ರಾಮಸ್ಥರೆಲ್ಲ ಒಂದೆಡೆ ಸೇರಿ ನಿರಂತರ ರಾಮ ಕೋಟಿ ಭಜನೆ, ಜಪ, ತಪ, ಉಪವಾಸ, ತತ್ಸಂಗ ಕಾರ್ಯಕ್ರಮಗಳನ್ನು ಮಾಡುವ ಮೂಲಕ ದಿನಪೂರ್ತಿ ಚಟುವಟಿಕೆಯಿಂದ ಕೂಡಿರುವಂತೆ ವಾಡಿಕೊಂಡು ಬರುವ ಮೂಲಕ ಮಕ್ಕಳು, ಮಹಿಳೆಯರು, ಹಿರಿಯರು ಮತ್ತು ಯುವ ಜನಾಂಗಕ್ಕೆ ವಾದರಿ ಯಾಗಿದ್ದಾರೆ.
ಹೇವಾವತಿ, ಎಸ್.ನಾರಾಯಣಸ್ವಾಮಿ, ಧನಂಜಯ, ಎನ್.ತಮ್ಮಣ್ಣ, ಎನ್.ವೆಂಕಟೇಶಪ್ಪ ಇದ್ದರು.