ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬುಧವಾರ ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವತಿಯಿಂದ ಏರ್ಪಡಿಸಿದ್ದ ಅಂತರರಾಷ್ಟಿçÃಯ ಮಿಡವೈವ್ಸ್ ಡೇ -೨೦೨೬ನ್ನು ಶುಶ್ರೂಷಕಿಯರು ಮತ್ತು ಉಪನ್ಯಾಸಕಿಯರು ದೀಪ ಬೆಳಗಿಸಿ ಚಾಲನೆ ನೀಡಿದರು.
ಬಾಗಲಕೋಟೆ: ದೇಶದಲ್ಲಿ ಸುಮಾರು ೩೯.೪ ಲಕ್ಷ (೩.೯೪ ಮಿಲಿಯನ್) ಶುಶ್ರೂಷಾ ಸಿಬ್ಬಂದಿ ಇದ್ದು, ೧೦೦೦ ಜನರಿಗೆ ಅಂದಾಜು ೧.೭೨೮ ದಾದಿಯರು ಮತ್ತು ಶುಶ್ರೂಷಕಿಯರು ಇದ್ದಾರೆ ಎಂದು ಸಜ್ಜಲಶ್ರೀ ನರ್ಸಿಂಗ್ ವಿಜ್ಞಾನಗಳ ಮಹಾವಿದ್ಯಾಳಯದ ಪ್ರಾಚಾರ್ಯ ಡಾ.ದಿಲೀಪ ನಾಟೇಕರ ತಿಳಿಸಿದರು.
ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ವತಿಯಿಂದ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟಿçÃಯ ಮಿಡ್‌ವೈವ್ಸ್ ಡೇ ಅಂಗವಾಗಿ `ಒನ್ ಮಿಲಿಯನ್ - ಮೋರ್ ಮಿಡವೈವ್ಸ್ಸ್ ' ಶೀರ್ಷಿಕೆಯೊಂದಿಗೆ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೨೦೨೬ರ ಆರಂಭದ ವೇಳೆಗೆ ಹೆಚ್ಚುತ್ತಿರುವ ತಾಯಂದಿರ ಆರೋಗ್ಯ ಬೇಡಿಕೆಗಳನ್ನು ಪೂರೈಸಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಭಾರತದ ಶುಶ್ರೂಷಕಿಯರು ಮತ್ತು ಶುಶ್ರೂಷಾ ಕಾರ್ಯಪಡೆಯು ಗಮನಾರ್ಹ ವಿಸ್ತರಣೆಗೆ ಒಳಗಾಗುತ್ತಿದೆ ಎಂದು ಹೇಳಿದರು.
ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಓಬಿಜಿ ವಿಭಾಗದ ಪ್ರಾಧ್ಯಾಪಕಿ ಡಾ. ಜಯಶ್ರೀ ಅವರಸಂಗ್, ಜಾಗತಿಕವಾಗಿ ಸೂಲಗಿತ್ತಿಯರ ಕೊರತೆಯಿದ್ದು, ಹೆರಿಗೆಯ ಸಮಯದಲ್ಲಿ ಮಹಿಳೆಯರು ಮತ್ತು ನವಜಾತ ಶಿಶುಗಳ ಸಾವುಗಳನ್ನು ತಡೆಗಟ್ಟುವಲ್ಲಿ ಸೂಲಗಿತ್ತಿಯರ ಪಾತ್ರವು ಪ್ರಮುಖವಾಗಿದೆ ಎಂದರು.
ಪ್ರಸವ ಮತ್ತು ಸ್ತಿçÃರೋಗ ಶಾಸ್ತçÀ ಶುಶ್ರೂಷಾ ವಿಭಾಗದ ಪ್ರಾಧ್ಯಾಪಕಿ ಡಾ. ಕಮಲಾ ಕೆ.ಎನ್ ಅವರು, ಒಂದು ಮಿಲಿಯನ್ ಹೆಚ್ಚು ಸೂಲಗಿತ್ತಿಯರು ಎಂಬ ವಿಷಯದ ಕುರಿತು ಮಾತನಾಡಿದರು.
ಉಪನ್ಯಾಸಕರಾದ ಪ್ರಿಯಾಂಕಾ ಜೆ, ಪೂಜಾ ಎಂ. ಹಾಗೂ ರೇಣುಕಾ ಕೆ. ಪೂಜಾ ಪಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಭಾ಼ಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರವಿತರಿಸಲಾಯಿತು.