ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಡಿವೈನ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಂಸ್ಥೆ ಇತ್ತೀಚಿಗೆ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ದೀಪ ಬೆಳಗಿಸಿದರು. ಮಡಿವಾಳಪ್ಪ ನಾಗರಹಳ್ಳಿ, ಡಾ. ಸದಾನಂದ ಪೆರ್ಲ, ತೃಪ್ತಿ ಲಾಖೆ, ವಸಂತ ಪ್ರತಿಪಥಿ, ಫಾ.ರಾರ್ಬಟ್ ರಾಡ್ರಿಗಸ್, ಫಾ.ಪ್ರವಿಣ್, ಫಾ.ರೊನಾಲ್ಡ್, ರವೀಂದ್ರ ಶಾಬಾದಿ, ಸಂಧ್ಯಾರಾಜ್ ಇತರರಿದ್ದರು.
- ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿಕೆ
- *ಡಿವೈನ್ ನರ್ಸಿಂಗ್ ಸಂಸ್ಥೆಯ ಪದವಿ ಪ್ರದಾನ ಸಮಾರಂಭ
ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ರಂಗದಲ್ಲಿ 371( ಜೆ) ಸೌಲಭ್ಯ ಪಡೆದು ವಿಶೇಷ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದೆ. ಈ ಭಾಗದ ಶೈಣಿಕ ಕ್ಷೇತ್ರದ ಬೆಳವಣಿಗೆಗೆ ಈ ಸೌಲಭ್ಯ ಬಳಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಕಲಬುರಗಿಯ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಡಿವೈನ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ನ 200ರಷ್ಟು ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಿ, ಸಂವಿಧಾನದ 371 (ಜೆ) ಕಲಂನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕಿಯ, ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ಗಳಲ್ಲಿ ಸೌಲಭ್ಯ ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ನರ್ಸಿಂಗ್ ಬಹುಬೇಡಿಕೆಯ ಕೋರ್ಸ್ ಆಗಿದ್ದು ಉದ್ಯೋಗ ಹೊಂದಲು ದೇಶ, ವಿದೇಶಗಳಲ್ಲಿ ವ್ಯಾಪಕ ಬೇಡಿಕೆ ಇದೆ. ಡಿವೈನ್ ಸಂಸ್ಥೆಯ ಅಧ್ಯಕ್ಷ ಡಾ.ಕಿರಣ್ ಜಾರ್ಜ್ ಅವರು ನರ್ಸಿಂಗ್ ಸಂಸ್ಥೆ ಪ್ರಾರಂಭಿಸಿ ಈ ಭಾಗದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ನರ್ಸಿಂಗ್ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯದ ಸೇವೆಯ ಅಂಗವಾಗಿ ಬಡವರಿಗೆ ಅನ್ನದಾನ, ಉಚಿತ ನರ್ಸಿಂಗ್ ಶಿಕ್ಷಣ, 33 ಬಾರಿ ರಕ್ತದಾನ ಶಿಬಿರ ಆಯೋಜನೆ, ಕಂಬಳಿ ವಿತರಣೆ ಸೇರಿೆ ಸಮಾಜ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯಾರ್ಹ ಎಂದರು.
ರಾಜ್ಯ ನರ್ಸಿಂಗ್ ಬೋರ್ಡಿನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ, ಉಪಮೇಯರ್ ತೃಪ್ತಿ ಲಾಖೆ, ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ನ್ಯಾಯವಾದಿ ವಸಂತ ಪ್ರತಿಪಥಿ, ಫಾ.ರಾರ್ಬಟ್ ರಾಡ್ರಿಗಸ್, ಫಾ.ಪ್ರವಿಣ್, ಫಾ.ರೊನಾಲ್ಡ್, ರವೀಂದ್ರ ಶಾಬಾದಿ, ಸಂಧ್ಯಾರಾಜ್ ಇತರರಿದ್ದರು.
"
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರೆತ ನಂತರ ಈ ಭಾಗದ ವಿದ್ಯಾರ್ಥಿಗಳು, ಯುವಕರ ಭವಿಷ್ಯ ಉಜ್ವಲವಾಗುತ್ತಿದೆ. ಈ ಸೌಲಭ್ಯ ಒದಗಿಸಿದ ಶ್ರೇಯಸ್ಸು ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆಯವರಿಗೆ ಸಲ್ಲಬೇಕು.
— ಅಲ್ಲಮಪ್ರಭು ಪಾಟೀಲ್, ದಕ್ಷಿಣ ಶಾಸಕ, ಕಲಬುರಗಿ.