37 manholes at a cost of Rs. 1.75 crore
ಕೋಲಾರ: ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಕ್ಷೇತ್ರದಲ್ಲಿ ಒಟ್ಟು 37 ಕೊಳವೆಬಾವಿ ಕೊರೆಯಿಸಲಾಗುತ್ತಿದ್ದು, ಒಟ್ಟು1.75 ಕೋಟಿ ರೂ. ವೆಚ್ಚವಾಗಲಿದೆ. ರಾಜ್ಯ ಸರ್ಕಾರ ಬಡರೈತರಿಗೆ, ಅಲೆಮಾರಿಗಳು ಸೇರಿ ವಿವಿಧ ಸಮುದಾಯಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲೂಕಿನ ನಾಗಲಾಪುರ ಗ್ರಾಮದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯಿಂದ ಗಂಗಾ ಕಲ್ಯಾಣ ಯೋಜನೆಯಡಿಮಂಗಳವಾರ ಕೊಳವೆಬಾವಿ ಕೊರೆಯಲು ಚಾಲನೆ ನೀಡಿ ಮಾತನಾಡಿದರು.
ಕಳೆದ ಬಾರಿ ಗುತ್ತಿಗೆದಾರರು 6 ತಿಂಗಳಲ್ಲಿ ಮುಗಿಯಬಹುದಾದ ಕೆಲಸವನ್ನು ವರ್ಷಾನುಗಟ್ಟಲೆ ಮಾಡಿದರು. ಈ ಬಾರಿ ಸರಿಯಾಗಿ ಕೆಲಸ ಮಾಡಬೇಕು. ಕಾಮಗಾರಿ ನಡೆಯುವಾಗ ರೈತರು ಮುಂದೆ ನಿಂತು ಎಷ್ಟು ಅಡಿ ಕೊರೆದಿದ್ದಾರೆ, ಎಷ್ಟು ಪೈಪ್ ಹಾಕಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಬೇಕು. ಆ ಮಾಹಿತಿ ನಮಗೆ ಕೊಡಬೇಕು. ಆ ನಂತರವಷ್ಟೇ ಗುತ್ತಿಗೆದಾರರಿಗೆ ಬಿಲ್ ಮಾಡಲಾಗುತ್ತದೆ. ಜತೆಗೆ ಕೊಳವೆ ಬಾವಿ ಕೊರೆಸಿ ಮೋಟರ್ ಪಂಪು ಕೊಡದೆ ಮತ್ತೊಂದು ಕಡೆ ಬೋರ್ವೆಲ್ ಕೊರೆಸಲು ಹೋಗಬಾರದು ಎಂದು ತಿಳಿಸಿದರು.
ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂದಟ್ಟಿ ಶಿವಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸೂಲೂರು ಗ್ರಾಪಂ ಮಾಜಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಮುಖಂಡರಾದ ವೀರಭದ್ರಯ್ಯ, ರವಿಕುಮಾರ್, ಸಿದ್ದಲಿ ಇದ್ದರು.