ಕಸಾಯಿಖಾನೆಗೆ ಸಾಗಿಸುತ್ತಿದ್ದ 37 ಹಸುಗಳ ರಕ್ಷಣೆ cows rescued 
ರಾಜ್ಯ

ಕಸಾಯಿಖಾನೆಗೆ ಸಾಗಿಸುತ್ತಿದ್ದ 37 ಹಸುಗಳ ರಕ್ಷಣೆ cows rescued

ಪ್ರಮುಖ ಮುಖ್ಯಾಂಶಗಳು

  • ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕಾರ್ಯಾಚರಣೆ
  • ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ದಾಳಿ
ಮುಳಬಾಗಿಲ: ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಮಂಗಳವಾರ ಹಿಂದೂ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಬರೋಬ್ಬರಿ 37ಕ್ಕೂ ಹೆಚ್ಚು ದೇಶೀಯ ಗೋವುಗಳನ್ನು ರಕ್ಷಿಸಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.cows rescued
ಜಹಿರಬಾದ್‌ದ ಮಹಬೂರ್ (49), ವಿಜಯಪುರದ ೈರೋಜ್ (32), ಸಲ್ಮಾನ್ (40) ಬಂಧಿತರು.
ಆಂಧ್ರಪ್ರದೇಶ ಕಡೆಯಿಂದ ಬೆಂಗಳೂರಿನತ್ತ ಕಂಟೇನರ್‌ನಲ್ಲಿ ಉಸಿರುಗಟ್ಟಿಸುವ ಹಾಗೆ ಹಸುಗಳನ್ನು ತುಂಬಿಕೊಂಡು ಸಾಗಿಸಲಾಗುತ್ತಿತ್ತು. ಹೈದರಾಬಾದ್ ಮತ್ತು ಆಂಧ್ರದ ಕಡೆಗಳಿಂದ 3 ಕಂಟೇನರ್‌ಗಳಲ್ಲಿ 100ಕ್ಕೂ ಹೆಚ್ಚು ಹಸುಗಳನ್ನು ತುಂಬಿಕೊಂಡು ಬೆಂಗಳೂರಿನ ಕಸಾಯಿಖಾನೆಗೆ ಸಾಗಣೆ ಮಾಡಲಾಗುತ್ತಿದೆ ಎಂದು ಮುಳಬಾಗಿಲು ಮತ್ತು ಕೋಲಾರದ ಗೋರಕ್ಷಕ ದಳ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭಿಸಿತ್ತು. ಅದರ ಆಧಾರದ ಮೇಲೆ ನಂಗಲಿ, ಹನುಮನಹಳ್ಳಿ, ಹೊಸಕೋಟೆ ಟೋಲ್ಗಳಲ್ಲಿ ಹದ್ದಿನ ಕಣ್ಣು ಇಟ್ಟಿದ್ದ ಕಾರ್ಯಕರ್ತರು ಹನುಮನಹಳ್ಳಿ ಟೋಲ್ ಬಳಿ ಕಂಟೇನರ್ ಹಿಡಿದು, ಮುಳಬಾಗಿಲು ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಪ್ರಕರಣ ದಾಖಲಾಗಿದೆ.
ಎಲ್ಲ ಹಸುಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಗೋಶಾಲೆಗೆ ಬಿಡಲಾಗಿದೆ.
ಹಿಂದೂಪರ ಸಂಘಟನೆಗಳ ಮುಖಂಡರಾದ ಮಂಜುನಾಥ್, ಕುಮಾರ್, ರಾಜು, ಶಿವ ಇತರರು ಇದ್ದರು.