ಮೇ 29 ರಿಂದ 3 ದಿನ ಎಫ್‌ಕೆಸಿಸಿಐ ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್ 
ರಾಜ್ಯ

ಮೇ 29 ರಿಂದ 3 ದಿನ ಎಫ್‌ಕೆಸಿಸಿಐ ಗ್ಲೋಬಲ್ ಎಂಎಸ್‌ಎಂಇ ಕಾನ್‌ಕ್ಲೇವ್

ಬೆಂಗಳೂರು: ಕರ್ನಾಟಕವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ),ಪೀಣ್ಯ ಕೈಗಾರಿಕೆಸಂಘದ ಜಂಟಿ ಆಶ್ರಯದಲ್ಲಿ ಮೇ 29ರಿಂದ 31ರವರೆಗೆ 3ನೇಆವೃತ್ತಿಯ ಎ್ಕೆಸಿಸಿಐ ಗ್ಲೋಬಲ್ಎಂಎಸ್‌ಎಂಇ ಕಾನ್ ಕ್ಲೇವ್ 2026ಹಮ್ಮಿಕೊಳ್ಳಲಾಗಿದೆ.ಅರಮನೆ ಮೈದಾನದತ್ರಿಪುರವಾಸಿನಿ ಸಭಾಂಗಣದಲ್ಲಿಕಾರ್ಯಕ್ರಮ ನಡೆಯಲಿದೆ.

ಈಕಾನ್‌ಕ್ಲೇವ್ ಸ್ಟೇಟ್ ಬ್ಯಾಂಕ್ಆಫ್ ಇಂಡಿಯಾದ ಸಹಯೋಗದೊಂದಿಗೆ,ಭಾರತ ಸರ್ಕಾರದಸಣ್ಣ ಮತ್ತು ಮಧ್ಯಮ ಕೈಗಾರಿಕಾಸಚಿವಾಲಯ, ಕರ್ನಾಟಕಸರ್ಕಾರದ ಸಣ್ಣ ಕೈಗಾರಿಕೆ ಇಲಾಖೆಯ ಬೆಂಬಲದೊಂದಿಗೆ ಆಯೋಜಿಸಲಾಗಿದೆ.

ಸ್ಥಳೀಯನಿರ್ಧಾರದಿಂದ ಜಾಗತಿಕ ಸಾಧನೆಎಂಬ ಧ್ಯೇಯ ವಾಕ್ಯದ ಅಡಿಯಲ್ಲಿನಡೆಯುವ ಕಾನ್‌ಕ್ಲೇವ್,ಜಾಗತಿಕ ಉದ್ಯಮನಾಯಕರು, ತಂತ್ರಜ್ಞಾನಒದಗಿಸುವವರು,ಹೂಡಿಕೆದಾರರನ್ನುಒಂದೇ ಸೂರಿನಡಿ ಒಗ್ಗೂಡಿಸಲಿದೆ.

ಮೂರುದಿನಗಳ ಕಾನ್‌ಕ್ಲೇವ್‌ನಲ್ಲಿಮೈಕ್ರೋ, ಸಣ್ಣಮತ್ತು ಮಧ್ಯಮ ಉದ್ಯಮಗಳ ವಿಭಿನ್ನಬೆಳವಣಿಗೆಯ ಅಗತ್ಯಗಳನ್ನು ಪೂರೈಸಲುಪೂರಕವಾದ ವಿವಿಧ ಗೋಷ್ಠಿಗಳುನಡೆಯಲಿವೆ.ಜಾಗತಿಕ ಮಟ್ಟದಲ್ಲಿಎಂಎಸ್‌ಎಂಇ ಕ್ಷೇತ್ರದಲ್ಲಿಸಾಧನೆ ಮಾಡಿ ಗಮನ ಸೆಳೆದಿರುವವರಿಗೆಸನ್ಮಾನ ಮತ್ತಿತರ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.

ಶುಕ್ರವಾರ(ಮೇ29) ಬೆಳಗ್ಗೆ10.30ಕ್ಕೆಡಿಸಿಎಂ ಡಿ.ಕೆ.ಶಿವಕುಮಾರ್ಕಾನ್‌ಕ್ಲೇವ್ ಉದ್ಘಾಟಿಸಲಿದ್ದಾರೆ.ಸಚಿವರಾದಎಂ.ಬಿ.ಪಾಟೀಲ್, ಶರಣಬಸಪ್ಪದರ್ಶನಾಪುರ,ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್,ಮುಖ್ಯ ಅತಿಥಿಗಳಾಗಿಆಗಮಿಸಲಿದ್ದಾರೆ.

ಎರಡನೆಮತ್ತು ಮೂರನೇ ದಿನದ ವಿವಿಧಕಾರ್ಯಕ್ರಮಗಳಲ್ಲಿ ಡಾ.ಜಿ.ಪರಮೇಶ್ವರ,ಪ್ರಿಯಾಂಕ್ಖರ್ಗೆ, ಮಾಜಿಡಿಸಿಎಂ ಡಾ.ಸಿ.ಎನ್.ಅಶ್ವಥ್ ನಾರಾಯಣಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಸಣ್ಣ ಕೈಗಾರಿಕಾ ವಲಯವು ಪರಸ್ಪರ ಸಂಪರ್ಕ ಸಾಧಿಸಲು, ಸಹಕಾರ ಬೆಳೆಸಿಕೊಳ್ಳಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು ಈ ಕಾನ್‌ಕ್ಲೇವ್ ಸಹಕಾರಿಯಾಗಿದೆ. ಕೈಗಾರಿಕೆಗಳ ಬೆಳವಣಿಗೆಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಎಐ (ಕೃತಕ ಬುದ್ದಿಮತ್ತೆ) ಇಂದು ಜಗತ್ತಿನಲ್ಲಿ ಕ್ರಾಂತಿ ಉಂಟು ಮಾಡುತ್ತಿದ್ದು, ನಮ್ಮಲ್ಲಿಯೂ ಇಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ದೊಡ್ಡ ಕೈಗಾರಿಕೆಗಳ ಬೆಳವಣಿಗೆಗೆ ಸಣ್ಣ, ಮಧ್ಯಮ ಕೈಗಾರಿಕೆಗಳ ಪಾತ್ರ ಬಹಳ ಮುಖ್ಯವಾಗಿದೆ.

— ಉಮಾ ರೆಡ್ಡಿ, ಅಧ್ಯಕ್ಷೆ, ಎಫ್​ಕೆಸಿಸಿಐ