ಕರ್ನಾಟಕದ ಕುಸ್ತಿಪಟುಗಳು 
ರಾಜ್ಯ

ಕರ್ನಾಟಕ ಕುಸ್ತಿಪಟುಗಳ ಐತಿಹಾಸಿಕ ಸಾಧನೆ: 28 ಚಿನ್ನದೊಂದಿಗೆ ಸಮಗ್ರ ಪ್ರಶಸ್ತಿ

ಪುದುಚೇರಿ:
ಮೇ
15
ರಿಂದ
ಮೇ
17
ರವರೆಗೆ
ಪುದುಚೇರಿಯ
ಉಪ್ಪಳಂನ
ರಾಜೀವ್
ಗಾಂಧಿ
ಒಳಾಂಗಣ
ಕ್ರೀಡಾಂಗಣದಲ್ಲಿ
ನಡೆದ
2
ನೇ
ದಕ್ಷಿಣ
ಭಾರತ
ಅಂಡರ್
-15
ಕುಸ್ತಿ
ಚಾಂಪಿಯನ್ಶಿಪ್
ನಲ್ಲಿ
ಕರ್ನಾಟಕದ
ಕುಸ್ತಿಪಟುಗಳು
ಫ್ರೀ
ಸ್ಟೈಲ್
,
ಗ್ರೀಕೋ
ರೋಮನ್
ಹಾಗೂ
ಮಹಿಳಾ
ವಿಭಾಗಗಳಲ್ಲಿ
ಅದ್ಭುತ
ಪ್ರದರ್ಶನ
ನೀಡಿ
ಐತಿಹಾಸಿಕ
ಸಾಧನೆ
ಮಾಡಿದ್ದಾರೆ
.

ಕರ್ನಾಟಕ ತಂಡವು ಒಟ್ಟು 28 ಚಿನ್ನ,1 ಬೆಳ್ಳಿ ಹಾಗೂ 01 ಕಂಚು ಪದಕಗಳನ್ನು ಗೆದ್ದು ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ರಾಜ್ಯಕ್ಕೆ ಕೀರ್ತಿ ತಂದಿದೆ.


ಅಪೂರ್ವ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿದ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ ಅವರು ಎಲ್ಲಾ ಕುಸ್ತಿಪಟುಗಳು, ತರಬೇತುದಾರರು ಹಾಗೂ ಅಧಿಕಾರಿಗಳನ್ನು ಅಭಿನಂದಿಸಿ, ಕರ್ನಾಟಕಕ್ಕೆ ಕೀರ್ತಿ ತಂದಿದ್ದಕ್ಕಾಗಿ ಶುಭಾಶಯಗಳನ್ನು ತಿಳಿಸಿದ್ದಾರೆ.