ಬೃಹತ್​ ಸ್ವಚ್ಛತಾ ಆಂದೋಲನ Garbage 
ರಾಜ್ಯ

ಮುಳಬಾಗಿಲಿನಲ್ಲಿ 2,803 ಟನ್​ ಕಸ ವಿಲೇ Garbage

ಮುಳಬಾಗಿಲು: ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್​ ಸ್ವಚ್ಛತಾ ಆಂದೋಲನದ Garbage ಫಲವಾಗಿ ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ಪಾರಂಪರಿಕ ಹಾಗೂ ಕಟ್ಟಡಗಳ ದುರಸ್ತಿಯ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿ ಸ್ವಚ್ಛ ಮಾಡಿ ನಗರದಿಂದ ದೂರದ ಖಾಲಿ ಜಾಗಗಳಿಗೆ ಸ್ಥಳಾಂತರಿಸಿದರು.
ನಗರಸಭೆಯ ಪೌರಾಯುಕ್ತ ವಿ.ಶ್ರೀಧರ್​ ನೇತೃತ್ವದಲ್ಲಿ ನಗರದಲ್ಲಿನ ತ್ಯಾಜ್ಯ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ಸಾಗಿಸಲು ನಾಲ್ಕು ತಂಡ ರಚಿಸಲಾಗಿತ್ತು. ಕೆಜಿಎಫ್​ ಮುಖ್ಯ ರಸ್ತೆಯಿಂದ 33 ಟನ್​ ಕಸ, ರಾಮಸಮುದ್ರಂ ಮುಖ್ಯ ರಸ್ತೆಯಲ್ಲಿ 170 ಟನ್​, ಕೆ.ಬೈಯಪ್ಪನಹಳ್ಳಿ ಹಾಗೂ ಮಲ್ಲನಾಯಕನಹಳ್ಳಿ ರಸ್ತೆಗಳಿಂದ 180 ಟನ್​ ಮತ್ತು ನ್ಯಾಯಾಲಯಗಳ ಕಟ್ಟಡಗಳ ಸಂಕೀರ್ಣ ರಸ್ತೆಯಿಂದ 280 ಟನ್​ ಹಾಗೂ ಕೋಲಾರ ಶ್ರೀನಿವಾಸಪುರ ರಸ್ತೆಯಿಂದ 90 ಟನ್​ ಹಾಗೂ ಬಿಡಿ ಕಸ 100 ಟನ್​ ಸೇರಿ ಒಟ್ಟು 853 ಟನ್​ ಹಾಗೂ ಹಳೆಯ ಕಟ್ಟಡಗಳ 1,950 ಟನ್​ ತ್ಯಾಜ್ಯವನ್ನು 7 ಜೆಸಿಬಿ, 4 ಟಿಪ್ಪರ್​ಗಳಲ್ಲಿ ವಿಲೇವಾರಿ ಮಾಡಲಾಗಿದೆ.
ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ನಡೆದ ಸ್ವಚ್ಛತಾ ಆಂದೋಲನದ ಪ್ರಯುಕ್ತ ನಗರದ ಎಲ್ಲ ವಾರ್ಡ್​ಗಳಲ್ಲಿದ್ದ ಕಸವನ್ನು ವಾಹನಗಳು ತುಂಬಿಸಿಕೊಂಡು ಹೋಗುತ್ತಿದ್ದನ್ನು ನಗರಸಭೆಯ ಅಧಿಕಾರಿಗಳು ಡ್ರೋಣ್​ ಕ್ಯಾಮರಾ ಮೂಲಕ ಸೆರೆ ಹಿಡಿದು ದಾಖಲಿಸಿಕೊಂಡಿದ್ದಾರೆ.
ನಗರದಲ್ಲಿ ಯಾರೇ ಆಗಲಿ ಕಸವನ್ನು ಎಲ್ಲೆಂದರಲ್ಲಿ ಸುರಿಯಬಾರದು. ಸದಾಕಾಲ ಕೋಲಾರಮ್ಮ ಸ್ವಚ್ಛತಾ ವಾಹನ ಗಸ್ತು ತಿರುಗುತ್ತಲಿರುತ್ತದೆ. ಯಾರೇ ಆಗಲಿ ಕಸ ಇಷ್ಟಾನುಸಾರ ಸುರಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
> ವಿ.ಶ್ರೀಧರ್​
ಪೌರಾಯುಕ್ತ, ನಗರಸಭೆ, ಮುಳಬಾಗಿಲು