ನಾಡಿನ ವಿವಿಧ ಪ್ರತಿಷ್ಠಿತ ಕಂಪನಿ, ಸಂಸ್ಥೆಗಳಲ್ಲಿ ಉದ್ಯೋಗ ಪಡೆದ ಕಲಬುರಗಿಯ ಶರಣಬಸವ ವಿವಿ ಬಿಬಿಎ ವಿಭಾಗದ ವಿದ್ಯಾರ್ಥಿನಿಯರೊಂದಿಗೆ ವಿವಿ ಕುಲಾಧಿಪತಿ ಡಾ.ದಾಕ್ಷಾಯಿಣಿ ಅಪ್ಪ, ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಇತರರಿದ್ದಾರೆ.
- ವಿವಿಧ ಕಂಪನಿಗಳಲ್ಲಿ ಜಾಬ್ ಗಿಟ್ಟಿಸಿಕೊಂಡು ಎಸ್ಬಿ ಕಾಲೇಜು ಸ್ಟೂಡೆಂಟ್ಸ್
- ಸಾಧಕಿಯರಿಗೆ ಡಾ.ಅವ್ವ ಅಭಿನಂದನೆ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ವಿಶೇಷವಾಗಿ ಮಹಿಳೆಯರಿಗಾಗಿ ನಡೆಸುತ್ತಿರುವ ಬ್ಯಾಚುಲರ್ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೆಷನ್ (ಬಿಬಿಎ) ವಿಭಾಗದ 28 ವಿದ್ಯಾರ್ಥಿನಿಯರು ವಿವಿಧ ಸಾಫ್ಟ್ವೇರ್ ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಕರ್ಷಕ ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ.
ವಿದ್ಯಾರ್ಥಿನಿಯರಾದ ಶಿವಾನಿ ಪಾಟೀಲ್, ಸುಷ್ಮಾ ಹಾಗೂ ಫರಿಯಾ ಅಂಜುಮ್ ಅವರು ಜಾಗತಿಕ ಮಟ್ಟದ ಆನ್ಲೈನ್ ವೃತ್ತಿಪರ ತರಬೇತಿ ಸಂಸ್ಥೆಯಾದ ಇಂಟೆಲಿಪಾಟ್ ಸಾಫ್ಟ್ವೇರ್ ಸೊಲ್ಯೂಷನ್ಸ್ನಲ್ಲಿ ವಾರ್ಷಿಕ 8 ಲಕ್ಷ ರೂ. ವೇತನದೊಂದಿಗೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇನ್ನೂ ಐವರು ವಿದ್ಯಾರ್ಥಿನಿಯರು ವಿವಿಧ ಕಂಪನಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ತಲಾ ವಾರ್ಷಿಕ 3 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ. ಆರು ವಿದ್ಯಾರ್ಥಿನಿಯರು ವಾರ್ಷಿಕ 2.5 ಲಕ್ಷ ರೂ. ಹಾಗೂ ಹತ್ತು ವಿದ್ಯಾರ್ಥಿನಿಯರು ತಲಾ 2 ಲಕ್ಷ ರೂ. ವೇತನದೊಂದಿಗೆ ವಿವಿಧ ಸಂಸ್ಥೆಗಳಲ್ಲಿ ನೇಮಕಗೊಂಡಿದ್ದಾರೆ.
ಈ ಮಹತ್ತರ ಸಾಧನೆಗಾಗಿ ವಿದ್ಯಾರ್ಥಿನಿಯರು, ಬೋಧಕ ಸಿಬ್ಬಂದಿ ಹಾಗೂ ಬಿಬಿಎ ವಿಭಾಗದ ಚೇರ್ಪರ್ಸನ್ ಪ್ರೊ.ಶಿಲ್ಪಾ ಕಂದಗೂಳ ಅವರನ್ನು ಸನ್ಮಾನಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಿಣಿ ಎಸ್.ಅಪ್ಪ ಅವರು ವಿದ್ಯಾರ್ಥಿನಿಯರು ಮತ್ತು ಶಿಕ್ಷಕರನ್ನು ಅಭಿನಂದಿಸಿ, ಇದು ಅತ್ಯಂತ ಶ್ಲಾನೀಯ ಹಾಗೂ ಮಾದರಿ ಸಾಧನೆ ಎಂದು ಪ್ರಶಂಸಿದರು.
ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ್ ಮಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ ಹಾಗೂ ಹಣಕಾಸು ಅಧಿಕಾರಿ ಡಾ.ಕಿರಣ್ ಮಕಾ ಅಭಿನಂದಿಸಿದ್ದಾರೆ.