ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯದಲ್ಲಿ ಮಾರಣಾಂತಿಕ ಕಾಯಿಲೆಗೆ 28 ಕೃಷ್ಣಮೃಗಗಳು (Blackbuck ) ಸಾವನ್ನೊಪ್ಪಿವೆ.
ಬೆಳಗಾವಿ ತಾಲೂಕಿನ ಭೂತರಾಮನಟ್ಟಿ ಗ್ರಾಮದಲ್ಲಿ ರಾಣಿ ಚನ್ನಮ್ಮ ಮೃಗಾಲಯ ಇದೆ. ನವೆಂಬರ್ 13 ರಂದು ಮೊದಲು 8 ಕೃಷ್ಣಮೃಗಳು ಮೃತಪಟ್ಟಿದ್ದವು. ಇಂದು ಮತ್ತೆ 20 ಕೃಷ್ಣಮೃಗಳ ಸಾವನ್ನೊಪ್ಪಿವೆ.
ನವೆಂಬರ್ 13 ರಂದು ಸಾವನ್ನಪ್ಪಿದ್ದ ಕೃಷ್ಣಮೃಗಗಳ ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್ಗೆ ಮರಣೋತ್ತರ ಪರೀಕ್ಷೆ ರವಾನೆ ಮಾಡಲಾಗಿದೆ. ಲ್ಯಾಬ್ನಿಂದ ವರದಿ ಬರೋ ಮುನ್ನವೇ ಮತ್ತೆ 20 ಕೃಷ್ಣಮೃಗಳು ಪ್ರಾಣ ಬಿಟ್ಟಿವೆ.ವೈದ್ಯರು ಮಾರಣಾಂತಿಕ ಬ್ರ್ಯಾಕ್ಟೇರಿಯಾದಿಂದ ಮೃತಪಟ್ಟ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಲ್ಲಿ 28 ಸಾವನ್ನೊಪ್ಪಿವೆ. ಮೃಗಾಲಯಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಈ ಕುರಿತಾಗಿ ತನಿಖೆ ಮಾಡಲು ಮೈಸೂರಿನಂದ ವೈದ್ಯರ ತಂಡ ಕರೆಸುತ್ತಿದೆ.