₹26 lakh fraud 
ರಾಜ್ಯ

ಕೆಪಿಎಸ್‌ಸಿ ಹೆಸರಲ್ಲಿ 26 ಲಕ್ಷ ರೂ. ವಂಚನೆ ಬೆಳಕಿಗೆ

ಪ್ರಮುಖ ಮುಖ್ಯಾಂಶಗಳು

  • ಆರ್‌ಡಿಪಿಎಆರ್ ಇಲಾಖೆಯಲ್ಲಿ ಕೆಲಸದ ಆಮಿಷ
  • ನಾಲ್ವರ ವಿರುದ್ಧ ಎ್ಐಆರ್ ದಾಖಲು
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿವೆ ಎನ್ನಲಾದ ಸಾಲು ಸಾಲು ಹಗರಣದ ಬೆನ್ನಲ್ಲೇ ಆಯೋಗದ ಹೆಸರಿನಲ್ಲಿ ಆರ್‌ಡಿಪಿಆರ್ ಇಲಾಖೆಯಲ್ಲಿ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೋರ್ವ 26 ಲಕ್ಷ ರೂ. ಪಡೆದು ವಂಚನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರದ ವಿಧಾನಸೌಧ ಠಾಣೆಯಲ್ಲಿ ಹೊಸಕೋಟೆ ನಿವಾಸಿ ಜಿ.ಕೆ.ರಘುನಂದನ್ ಎಂಬುವರು ಜು.18 ರಂದು ದೂರು ದಾಖಲಿಸಿದ್ದಾರೆ. ಕುಟುಂಬಸ ಸದಸ್ಯರಿಗೆ ಖಾಸಗಿ ಹೋಟೆಲ್‌ನಲ್ಲಿ ಪರಿಚಯವಾಗಿದ್ದ ಸಂತೋಷ್ ಹೊಸಮನಿ ಹಾಗೂ ರಾವ್, ಬಸವರಾಜ್, ಮಹೇಶ್ ಎಂಬುವರ ಮೇಲೆ ಎ್ಐಆರ್ ದಾಖಲಾಗಿದೆ.
ಸಂತೋಷ್ ಹೊಸಮನಿ ತಾನು ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೆಪಿಎಸ್‌ಸಿ, ಉದ್ಯೋಗ ಸೌಧದ ಅಧಿಕಾರಿಗಳು ಮತ್ತು ವಿಧಾನಸೌಧದ ಸಚಿವಾಲಯದ ಅಧಿಕಾರಿಗಳು ನೇರ ಸಂಪರ್ಕ ಮತ್ತು ಪರಿಚಯವಿದ್ದು ನಿಮಗೆ ಕೆಪಿಎಸ್‌ಸಿ ಮುಖೇನ ‘ಸಿ’ ದರ್ಜೆಯ ಪಿಡಿಒ ಕೆಲಸ ಕೊಡಿಸುತ್ತೇನೆಂದು ನಂಬಿಸಿ 50 ಲಕ್ಷದ ಹಣದ ಬೇಡಿಕೆ ಇಟ್ಟಿದ್ದಾನೆ. ಮುಂಗಡವಾಗಿ 20 ಲಕ್ಷ ರೂ.ನೀಡಬೇಕು ಹೇಳಿದ್ದಾನೆ. ಡಿಸೆಂಬರ್ 2024ರಂದು 10 ಲಕ್ಷ ರೂ. ಮಹೇಶ್ ಮತ್ತು ನಂದೀಶ್ ಎಂಬುವರ ಮೂಲಕ ನೀಡಿದ್ದಾನೆ. ನಂತರ ಮಾರ್ಚ್ 2025ರಂದು 2 ಲಕ್ಷ ರೂ. ಹೀಗೆ ಹಂತ ಹಂತವಾಗಿ 26 ಲಕ್ಷ ರೂ.ನೀಡಿದ್ದಾರೆ.
ಹುದ್ದೆಯ ಆದೇಶ ಪ್ರತಿ ಬರುವುದು ತಡವಾಗಿದೆ ಎಂದು ತನ್ನನ್ನು ನಂಬಿಸಲು ಸಂತೋಷನು ಬಸವರಾಜ್ ಎಂಬ ವ್ಯಕ್ತಿಯಿಂದ ಸಮಜಾಯಿಸಿದ್ದಾನೆ. ನಂತರ ರಾವ್ ಎಂಬ ವ್ಯಕ್ತಿಯಿಂದ ಕೆಪಿಎಸ್‌ಸಿ ಕಚೇರಿ ಸ್ಥಿರ ದೂರವಾಣಿಯಿಂದ ಕರೆ ಮಾಡಿಸಿ ಭರವಸೆ ನೀಡಿದ್ದರು. ಹೀಗೆ ಸುಳ್ಳು ಹೇಳುತ್ತಾ 26 ಲಕ್ಷ ರೂ. ಪಡೆದು ವಂಚನೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌಧ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.