ಭೈರವೇಶ್ವರಸ್ವಾಮಿ ಹುಂಡಿಯಲ್ಲಿ 24.26 ಲಕ್ಷ ಸಂಗ್ರಹ bhairaveshwaraswamy
ಕದರೀಪುರ: ಕೋಲಾರ ತಾಲೂಕು ವೇಮಗಲ್ ಹೋಬಳಿಯ ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಪುರಾತನ ಪ್ರಸಿದ್ಧ ಸೀತಿ ಭೈರವೇಶ್ವರ ಮತ್ತು ಶ್ರೀಪಥೇಶ್ವರಸ್ವಾಮಿ ದೇವಾಲಯದ ದೇವರ ಹುಂಡಿಯಲ್ಲಿ 22,29,915ರೂ ಮತ್ತು ಅನ್ನದಾಸೋಹ ಹುಂಡಿಯಲ್ಲಿ 1,96,654 ರೂ. ಸಂಗ್ರಹವಾಗಿದೆ.bhairaveshwaraswamy
ಏಪ್ರಿಲ್ನಲ್ಲಿ ಯುಗಾದಿಗೆ ಜಾತ್ರೆ ನಡೆಯಲಿದ್ದು, ಭಕ್ತರ ಸಂಖ್ಯೆ ಹೆಚ್ಚಳವಾಗುವ ಹಿನ್ನೆಲೆ ಹುಂಡಿ ಖಾಲಿ ಮಾಡಲು ಗುರುವಾರ ಎಣಿಕೆ ಮಾಡಲಾಯಿತು. ಒಟ್ಟು 24,26,654 ರೂ. ಗಳು ಸಂಗ್ರಹವಾಗಿದೆ. ಅದರಲ್ಲಿ ಹರಿದ ನೋಟುಗಳು, ಬಣ್ಣ ಬದಲಾಗಿರುವ ಹಾಗೂ ನಕಲಿನೋಟುಗಳು ಮತ್ತು ಚಲಾವಣೆ ಇಲ್ಲದ ನೋಟುಗಳು ಸಹ ಇದ್ದವು. ಎಣಿಕೆ ಕಾರ್ಯದ ನಂತರ ದೇವಾಲಯದ ಖಾತೆಗೆ ಹಣ ಜಮೆ ಮಾಡಲಾಯಿತು.
ಮುಜುರಾಯಿ ತಹಸೀಲ್ದಾರ್ ಮೋಹನ್ ಕುಮಾರ್, ಉಪತಹಸೀಲ್ದಾರ್ ಹೇಮಲತಾ, ರಾಜಸ್ವ ನಿರೀಕ ಮಂಜುನಾಥ, ಕಾರ್ಯ ನಿರ್ವಹಣಾಧಿಕಾರಿ ಸುಬ್ರಮಣಿ, ಪಾರುಪತ್ತೇದಾರ ವೆಂಕಟೇಶ್, ಮದ್ದೇರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನರಸಿಂಹಪ್ಪ, ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಸುಜಯ್ ಕುಮಾರ್, ಸಿಬ್ಬಂದಿ ಶಂಕರ್, ರಾಜೇಶ್ಬಾಬು, ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಗ್ರಾಮಸಹಾಯಕರು ದೇವಸ್ಥಾನದ ಸಿಬ್ಬಂದಿ ಇದ್ದರು.