ಗೋಕಾಕದಲ್ಲಿ ಆಯೋಜಿಸಿದ್ದ ಬಹತ್ ಲೋಕ ಅದಾಲತ್ನಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾ-ಧೀಶ ಉಮೇಶ ಆತ್ನುರೆ ಅವರು ಕಗಾರರೊಂದಿಗೆ ಸಮಾಲೋಚನೆ ನಡೆಸಿದರು.
ಗೋಕಾಕ: ಇಲ್ಲಿನ ತಾಲೂಕು ಕಾನೂನು ಸೇವೆಗಳ ಸಮಿತಿ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಬಹತ್ ಲೋಕ ಅದಾಲತ್ನಲ್ಲಿ ಗೋಕಾಕ ನ್ಯಾಯಾಲಯದ 1,749 ಮತ್ತು ಮೂಡಲಗಿ ಜೆಎಂಎ್ಸಿ ನ್ಯಾಯಾಲಯದ 373 ಪ್ರಕರಣ ಸೇರಿ ಒಟ್ಟು 2,112 ಪ್ರಕರಣ ಇತ್ಯರ್ಥಗೊಂಡು, ಕಗಾರರಿಗೆ 4,93,05,611 ರೂ. ಮೊತ್ತ ಪರಿಹಾರಕ್ಕೆ ಆದೇಶಿಸಲಾಯಿತು.
ಇವುಗಳಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ 21, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ 17 ಹಾಗೂ ಪ್ರಧಾನ ಜೆಎಂಎ್ಸಿ ನ್ಯಾಯಾಲಯದ 461, 1ನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಲಯದ 710 ಮತ್ತು 2ನೇ ಹೆಚ್ಚುವರಿ ಜೆಎಂಎ್ಸಿ ನ್ಯಾಯಾಲಯದ 540 ಪ್ರಕರಣ, ಗೋಕಾಕ ನ್ಯಾಯಲಯಗಳಲ್ಲಿ ಹಿರಿಯ ನಾಗರಿಕರಿಗೆ ಸೇರಿದ 17 ಪ್ರಕರಣ ಇತ್ಯರ್ಥಗೊಂಡಿವೆ ಎಂದು ತಾಲೂಕು ಕಾನೂನು ಸಮಿತಿ ಅಧ್ಯರೂ ಆಗಿರುವ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಉಮೇಶ ಆತ್ನುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.