ಪ್ರಥಮ ಏಕಾದಶಿ ಹಿನ್ನೆಲೆಯಲ್ಲಿ ವಿಜಯಪುರದ ಹಾರ್ಡಿಪುರ ಕ್ಷೇತ್ರದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದಲ್ಲಿ 20 ಸಾವಿರ ಲಡ್ಡುಗಳನ್ನು ತಯಾರಿಸುತ್ತಿರುವುದು. 
ರಾಜ್ಯ

ಆಷಾಢ ಏಕಾದಶಿಗೆ 20 ಸಾವಿರ ಲಡ್ಡು ಪ್ರಸಾದ / VIJAYAPUR

ವಿಜಯಪುರ : ಪ್ರಥಮ ಏಕಾದಶಿ ಹಿನ್ನೆಲೆಯಲ್ಲಿ ಪಟ್ಟಣದ ಹಾರ್ಡಿಪುರ ಕ್ಷೇತ್ರದ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ವಿತರಿಸಲು 20 ಸಾವಿರ ಲಡ್ಡು ತಯಾರಿಸಲಾಗುತ್ತಿದೆ ಎಂದು ದೇವಾಲಯ ಸಮಿತಿಯ ಶ್ರೀನಿವಾಸಪ್ಪ ತಿಳಿಸಿದ್ದಾರೆ.
ಜು.25ರಂದು ಆಷಾಢ ಏಕಾದಶಿ ಪ್ರಯುಕ್ತ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣುನಾಮ ಪಾರಾಯಣ, ವಿಶೇಷ ಹೂವಿನ, ಆಭರಣಗಳಿಂದ ಸಿಂಗಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಅನುಜ್ಞೆ, ಸ್ವಸ್ತಿವಾಚನ, ವಿಷ್ವಕ್ಸೇನ ಆರಾಧನೆ, ಭಗವದ್​ ವಾಸುದೇವ ಪುಣ್ಯಾಹ ವಾಚನ, ರಕ್ಷಾಬಂಧನ, ಕಳಸಾರಾಧನೆ, ಅಗ್ನಿಪ್ರತಿಷ್ಠೆ, ನರಸಿಂಹ, ಪ್ರಧಾನ ಹೋಮ, ಪರಿವಾರ ಹೋಮ, ಅಷ್ಟಲಕ್ಷ್ಮೀ, ಶಾಂತಿ, ಶ್ರೀ ಲಕ್ಷ್ಮೀನರಸಿಂಹ, ಮೃತ್ಯುಂಜಯ, ಧನ್ವಂತರಿ ಹೋಮ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಜಯರಾಮ್​ ತಿಳಿಸಿದ್ದಾರೆ.
ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಸಾಯಿ ಮಂಜುನಾಥ್​ ಮಹಾರಾಜ್​, ಸಚಿವ ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್​, ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಚಂದ್ರಣ್ಣ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್​, ಸದಸ್ಯರಾದ ವಿ.ಮಂಜುನಾಥ್​, ಪ್ರಸನ್ನಕುಮಾರ್​, ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು, ತಹಸೀಲ್ದಾರ್​ ಅನಿಲ್​ ಕುಮಾರ್​, ಆರಕ್ಷಕ ವೃತ್ತ ನಿರೀಕ್ಷಕ ಲಕ್ಷಿ$್ಮನಾರಾಯಣ, ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ದಿನ್ನೂರು ವೆಂಕಟೇಶ್​, ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್​, ಮುಖ್ಯಾಧಿಕಾರಿ ಸತ್ಯನಾರಾಯಣ್​ ಹಾಗೂ ಇತರರು ಭಾಗವಹಿಸಲಿದ್ದಾರೆ.