2 ಟಿಪ್ಪರ್ ಹಾಗೂ ಜೆಸಿಬಿ ವಶ
ಧಾರವಾಡ: ಅಕ್ರಮವಾಗಿ ಮೊರಂ ಸಾಗಣೆ ಮಾಡುತ್ತಿದ್ದ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ 2 ಟಿಪ್ಪರ್ ಹಾಗೂ ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಬೇಲೂರು ಗ್ರಾಮದ ಸರ್ಕಾರಿ ಗುಡ್ಡದಲ್ಲಿ (ಗೈರಾಣ ಸರ್ವೇ ನಂ. 355) ಜೆಸಿಬಿ, ಟಿಪ್ಪರ್ ಬಳಸಿ ಮೊರಂ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ್ ಹಾಗೂ ತಂಡ ಮತ್ತು ಬೇಲೂರು ಗ್ರಾಮ ಆಡಳಿತಾಧಿಕಾರಿ ಸಾವಿತ್ರಿ ದೊಣ್ಣಿ ನೇತೃತ್ವದಲ್ಲಿ ದಾಳಿ ಮಾಡಿದೆ. 2 ಟಿಪ್ಪರ್ ಮತ್ತು ಜೆಸಿಬಿಯನ್ನು ಜಪ್ತಿ ಮಾಡಿ ಗರಗ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಲಾಗಿದೆ.