ಬಾಗೇಪಲ್ಲಿ:
ರಾಜ್ಯದ ಇತಿಹಾಸದಲ್ಲಿ ಗುಡಿಬಂಡೆ, ಚೇಳೂರು, ಬಾಗೇಪಲ್ಲಿ ಸೇರಿ 3 ತಾಲೂಕುಗಳನ್ನು ಒಳಗೊಂಡಿರುವ ಏಕೈಕ ವಿಧಾನಸಭಾ ಕ್ಷೇತ್ರ ಬಾಗೇಪಲ್ಲಿ ಎಸ್ಐಆರ್(ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ)ನಲ್ಲಿ ಒಟ್ಟು 19594 ಗೈರು, ಮರಣ, ಸ್ಥಳಾಂತರ, ನಕಲಿ ಹಾಗೂ ಇತರ ಮತದಾರರನ್ನು ಗುರುತಿಸಲಾಗಿದೆ.
ಬಿಎಲ್ಒಗಳು ಮನೆ ಮನೆ ಭೇಟಿ ನೀಡಿ ದಾಖಲೆ ಸಂಗ್ರಹಿಸಲು ಹಾಗೂ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಲು ಆ.17ರವರೆಗೂ ಅವಕಾಶ ನೀಡಲಾಗಿದ್ದು, ಆ.24ಕ್ಕೆ ಕರುಡು ಮತದಾರರ ಪಟ್ಟಿ ಪ್ರಸ್ತುತ ಪಡಿಸಲಾಗವುದು. ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ಅರ್ಜಿ ಸಲ್ಲಿಸಲು ಆ.24ರಿಂದ ಸೆ.23ರವರೆಗೂ ಅವಕಾಶ ಕಲ್ಪಿಸಲಾಗಿದೆ.
— ಮನೀಷಾಪತ್ರಿ, ತಹಸೀಲ್ದಾರ್ ಬಾಗೇಪಲ್ಲಿ
ಕ್ಷೇತ್ರದ ಜನಸಂಖ್ಯೆ 2023ರ ವಿಧಾನಸಭೆ ಚುನಾವಣೆ ಅನುಪಾತಕ್ಕಿಂತ ಶೇ.7 ಹೆಚ್ಚಾಗಿದೆ. ಎಸ್ಐಆರ್ ಪ್ರಕ್ರಿಯೆಯಿಂದ ಆಂಧ್ರ ಹಾಗೂ ಬೆಂಗಳೂರು ಮೂಲದ ಬಹುತೇಕ ಮತದಾರರನ್ನು ಹಾಗೂ ಹಲವೆಡೆ ಮತದಾನದ ಹಕ್ಕು ಪಡೆದುಕೊಂಡಿರುವ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಪಾರದರ್ಶಕ ಚುನಾವಣೆಗೆ ಅನುಕೂಲ ಕಲ್ಪಿಸಿರುವ ಎಸ್ಐಆರ್ ಪ್ರಕ್ರಿಯೆಯನ್ನು ಸ್ವಾಗತಿಸುತ್ತೇವೆ.
— ಗಣೇಶ್ ರೆಡ್ಡಿ, ಬಾಗೇಪಲ್ಲಿ