ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಯ ಬೆನ್ನಲ್ಲೇ, ರಾಜ್ಯದ ದಶಕಗಳ ಕಾಲದ ಬಾಕಿ ಉಳಿದಿರುವ ಪ್ರಮುಖ ಬೇಡಿಕೆಗಳನ್ನು(Karnataka Demands) ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಪತ್ರ ಬರೆದಿದ್ದಾರೆ. ಒಟ್ಟು 18 ಪ್ರಮುಖ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ಸಿಎಂ, ಕೇಂದ್ರ ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.ಕರ್ನಾಟಕದ ಪ್ರಗತಿಗೆ ವೇಗ ನೀಡಲು ಈ ಯೋಜನೆಗಳ ಅನುಷ್ಠಾನ ಅತ್ಯಗತ್ಯ ಎಂದು ಸಿಎಂ ಪ್ರತಿಪಾದಿಸಿದ್ದಾರೆ.
ಪತ್ರದಲ್ಲಿರುವ ಪ್ರಮುಖ 18 ಬೇಡಿಕೆಗಳು ಇಲ್ಲಿವೆ
1. ರೈಲ್ವೆ ಮತ್ತು ಸಾರಿಗೆ ಸಂಪರ್ಕ
ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ: ರಾಜ್ಯ ಸರ್ಕಾರ 1,123 ಎಕರೆ ಭೂಮಿ ನೀಡಿದ್ದರೂ ಈ ಯೋಜನೆ ಇನ್ನೂ ಅನುಷ್ಠಾನವಾಗಿಲ್ಲ. ಇದನ್ನು ತಕ್ಷಣ ಆರಂಭಿಸಬೇಕು.
ಹೈಸ್ಪೀಡ್ ರೈಲು ವಿಸ್ತರಣೆ: ಬೆಂಗಳೂರು-ಮೈಸೂರು ನಡುವೆ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಬೇಕು.
ಬೆಂಗಳೂರು ಉಪನಗರ ರೈಲು: ಈ ಯೋಜನೆಗೆ ಕೇಂದ್ರದ ಪಾಲಿನ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
2. ನೀರಾವರಿ ಮತ್ತು ಕುಡಿಯುವ ನೀರು
ಮೆಕೇದಾಟು ಯೋಜನೆ: ಬೆಂಗಳೂರಿನ ಕುಡಿಯುವ ನೀರಿಗಾಗಿ ರೂಪಿಸಲಾದ 67 ಟಿಎಂಸಿ ಸಾಮರ್ಥ್ಯದ ಮೆಕೇದಾಟು ಯೋಜನೆಗೆ ತಕ್ಷಣ ಪರಿಸರ ಮತ್ತು ತಾಂತ್ರಿಕ ಅನುಮೋದನೆ ನೀಡಬೇಕು.
ಮಹದಾಯಿ (ಕಳಸಾ-ಬಂಡೂರಿ): ಕುಡಿಯುವ ನೀರಿನ ಈ ಯೋಜನೆಗೆ ವನ್ಯಜೀವಿ ಮಂಡಳಿಯಿಂದ ತಕ್ಷಣ ಕ್ಲಿಯರೆನ್ಸ್ ನೀಡಲು ಮನವಿ ಮಾಡಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ: ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಇದಕ್ಕೆ 'ರಾಷ್ಟ್ರೀಯ ಯೋಜನೆ' ಸ್ಥಾನಮಾನ ನೀಡಬೇಕು.
ಜಲ ಜೀವನ್ ಮಿಷನ್: ಕೇಂದ್ರ ಸರ್ಕಾರದಿಂದ ಬರಬೇಕಾದ 17,554 ಕೋಟಿ ರೂ. ಬಾಕಿ ಹಣವನ್ನು ಬಿಡುಗಡೆ ಮಾಡಬೇಕು.
15ನೇ ಹಣಕಾಸು ಆಯೋಗದ ಅನುದಾನ: ಗ್ರಾಮ ಪಂಚಾಯತ್‌ಗಳಿಗೆ ಮತ್ತು ಬೆಂಗಳೂರಿನ ಮೂಲಸೌಕರ್ಯಕ್ಕೆ (6,000 ಕೋಟಿ ರೂ.) ಘೋಷಿಸಲಾದ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.
4. ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ
9ನೇ ಶೆಡ್ಯೂಲ್‌ಗೆ ಸೇರ್ಪಡೆ: ಕರ್ನಾಟಕದ 56% ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು.
ಪರಿಶಿಷ್ಟ ಪಂಗಡಗಳ ಪಟ್ಟಿ: ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಎಸ್‌ಟಿ (ST) ಪಟ್ಟಿಗೆ ಸೇರಿಸಲು ಕೋರಲಾಗಿದೆ.
ರಾಯಚೂರಿನಲ್ಲಿ ಏಮ್ಸ್ (AIIMS): ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಶೀಘ್ರ ಅನುಮೋದನೆ ನೀಡಬೇಕು.
ಕಲ್ಯಾಣ ಕರ್ನಾಟಕಕ್ಕೆ ಬೆಂಬಲ: ಆರ್ಟಿಕಲ್ 371(J) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ 5,000 ಕೋಟಿ ರೂ. ವಿಶೇಷ ನೆರವು ನೀಡಬೇಕು.
"ವ್ಯವಸ್ಥಿತ ಅಸಮಾನತೆ ಹೋಗಲಾಡಿಸಿ"
ಕರ್ನಾಟಕವು ದೇಶದ ತೆರಿಗೆ ಸಂಗ್ರಹಕ್ಕೆ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಕೇಂದ್ರದಿಂದ ಸಿಗಬೇಕಾದ ಅನುಮೋದನೆಗಳು ಮತ್ತು ಹಣಕಾಸಿನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬವು ರಾಜ್ಯದ ಜನರ ಮನಸ್ಸಿನಲ್ಲಿ 'ವ್ಯವಸ್ಥಿತ ಅಸಮಾನತೆ'ಯ ಭಾವನೆ ಮೂಡಿಸುತ್ತಿದೆ. ಈ ದೂರುಗಳನ್ನು ಸರಿಪಡಿಸುವ ಮೂಲಕ ನಿಜವಾದ ಸಹಕಾರಿ ಫೆಡರಲಿಸಂ ಅನ್ನು ಎತ್ತಿಹಿಡಿಯಿರಿ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.