Bengaluru traffic is ‘destroying’ productivity, says AI startup founder 
ರಾಜ್ಯ

ಬೆಳಿಗ್ಗೆ 10 ಗಂಟೆಯಾದ್ರು ಆಫೀಸ್​ನಲ್ಲಿಲ್ಲ ಉದ್ಯೋಗಿಗಳು; ಬೆಂಗಳೂರಿನ ಟ್ರಾಫಿಕ್​ ವಿರುದ್ಧ ದನಿ ಎತ್ತಿದ ಎಐ ಸ್ಟಾರ್ಟ್‌ಅಪ್ ಫೌಂಡರ್

ಪ್ರಮುಖ ಮುಖ್ಯಾಂಶಗಳು

  • ಟ್ರಾಫಿಕ್​ನಿಂದ ಉದ್ಯೋಗಿಗಳ ಹುಮ್ಮಸ್ಸು, ಫ್ರೆಶ್​ನೆಸ್​ ಮೇಲೆ ಪರಿಣಾಮ ಬೀರುತ್ತಿದೆ.
  • ಅಪ್ಲೈಡ್ ಎಐ ಸ್ಟುಡಿಯೋದ ಸಂಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಪೋಸ್ಟ್.
  • 10:15 ಟ್ರಾಫಿಕ್​ನಿಂದ ಉದ್ಯೋಗಿಗಳು ಕಚೇರಿಗೆ ಬರಲಾಗುತ್ತಿಲ್ಲ ಎಂದು ಪೋಸ್ಟ್.
’Bengaluru traffic is ‘destroying’ productivity, says AI startup founder:ಬೆಂಗಳೂರನ್ನು ಸಿಲಿಕಾನ್​ ಸಿಟಿ, ಗಾರ್ಬೆಜ್​, ಐಟಿ-ಬಿಟಿ, ಗಾರ್ಡ್​​ ಸಿಟಿ ಎಂದು ಕರೆಯಲಾಗುತ್ತದೆ. ಸದ್ಯ ಈಗ ಸಿಕ್ಕಿರುವ ಮತ್ತೊಂದು ಹೊಸ ಹೆಸರು ಎಂದರೆ ಅದು ಟ್ರಾಫಿಕ್ ನಗರ ಎಂದು. ಈ ದಟ್ಟಣೆಯಿಂದಾಗಿ ಉದ್ಯೋಗಿಗಳ ಕೆಲಸದ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಅಪ್ಲೈಡ್ ಎಐ ಸ್ಟುಡಿಯೋದ ಸಂಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಎನ್ನುವವರು ಲಿಂಕ್ಡ್ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್​ವೊಂದು ಸೋಶಿಯಲ್​ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.
ಬೆಳಿಗ್ಗೆ 10:15 ಆದರೂ ಸಹ ಕಚೇರಿಯ ಸೀಟುಗಳು ಖಾಲಿ ಖಾಲಿ ಇರುವ ಬಗ್ಗೆ ಪೋಟೋ ಹಾಕಿರುವ ಅವರು ಮೂಲಭೂತ ಸೌಕರ್ಯ, ಪ್ರಯಾಣದ ಆಯಾಸ ಜೊತೆಗೆಕೆಲಸವನ್ನು ಹೇಗೆ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಈ ಪೋಸ್ಟ್​ಗೆ ಲಿಂಕ್​ಡಿನ್​ ಬಳಕೆದಾರರು ಹೌದೆಂದು ಕಾಮೆಂಟ್​ಗಳನ್ನು ಮಾಡಿದ್ದಾರೆ.

ಬಾಲಾ ಪನ್ನೀರ್​ ಸೆಲ್ವಂ ಅವರು ಹಂಚಿಕೊಂಡಿರುವ ಪೋಸ್ಟ್​ನಲ್ಲಿ ಹೀಗಿದೆ

'ಸಾಮಾನ್ಯವಾಗಿ ಬೆಳಿಗ್ಗೆ 10:15 ರ ವೇಳೆಗೆ ಗಿಜಿಗುಡಬೇಕಿದ್ದ ಕಚೇರಿಗಳು ಬೆಂಗಳೂರಿನಲ್ಲಿ ಈಗ ಖಾಲಿಯಾಗಿರುತ್ತಿವೆ. ಇದಕ್ಕೆ ಕಾರಣ ಟ್ರಾಫಿಕ್​ ಎಂದು ಎಐ ಸ್ಟುಡಿಯೋದ ಸಂಸ್ಥಾಪಕ ಬಾಲಾ ಪನ್ನೀರ್‌ಸೆಲ್ವಂ ಬರೆದುಕೊಂಡಿದ್ದಾರೆ. ಮುಂದುವರೆದು, ಸಮಸ್ಯೆ ನಮ್ಮ ಉದ್ಯೋಗಿಗಳದ್ದಲ್ಲ. ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್ ಲೇಔಟ್‌ಗೆ 17 ಕಿ.ಮೀ ದೂರ ಮಧ್ಯಾಹ್ನ 4 ಗಂಟೆಯ ಬಿಡುವಿನ ವೇಳೆಯಲ್ಲೂ ತಲುಪಲು ಬರೋಬ್ಬರಿ 2 ಗಂಟೆ ಬೇಕಾಗುತ್ತದೆ. ಟ್ರಾಫಿಕ್​ ಈ ಮಟ್ಟಕ್ಕೆ ಇರುತ್ತದೆ ಎಂದು ಹೇಳಿದ್ದಾರೆ.
'ಎಚ್​ಎಸ್​ಆರ್​ ಲೇಔಟ್​ನ ಸುತ್ತಮುತ್ತ 4 ಕಿ.ಮೀ ದೂರ ಸ್ಕೂಟರ್​ನಲ್ಲಿ ಪ್ರಯಾಣಿಸಲು 20 ನಿಮಿಷ ಬೇಕಾಗುತ್ತದೆ. ಅದೇ ಕಾರಿನಲ್ಲಿ 30 ನಿಮಿಷ ಬೇಕಾಗುತ್ತದೆ. ಇನ್ನು ಪೀಕ್ ಅವರ್​ನಲ್ಲಿ ಇನ್ನೊಂದು ಹತ್ತು ನಿಮಿಷ ಹೆಚ್ಚಾಗಬಹುದು. ಸ್ಕೂಟರ್​ಗಳು ಟ್ರಾಫಿಕ್​ ರಸ್ತೆಯಲ್ಲಿ ಬೃಹತ್​​ ವಾಹನಗಳ ನಡುವೆ ತೂರಿಕೊಂಡು ಹೋಗುವುದು, ಸಿಗ್ನಲ್ ಜಂಪ್ ಮಾಡಿ ಹೋಗುವ ಸಾಹಸಗಳ ಮೂಲಕ ಕಚೇರಿ ತಲುಪಲಾಗುತ್ತದೆ. ಅಷ್ಟರಲ್ಲಿ ಉದ್ಯೋಗಿಗಳಿಗೆ ಬೆಳಿಗ್ಗೆದ್ದು ಹೊರಟಾಗ ಇದ್ದ ಫ್ರೆಶ್​ನೆಸ್, ಕೆಲಸ ಮಾಡುವ ಹುಮ್ಮಸ್ಸು​ ಕಳೆದುಕೊಂಡು ಬಿಟ್ಟಿರುತ್ತಾರೆ' ಎಂದು ಕಳವಳ ವ್ಯಕ್ತಪಡಿಸಿದರು.

ಟ್ರಾಫಿಕ್​...ದಣಿವು

'ಸಂಜೆ 5 ಅಥವಾ 6 ಗಂಟೆಗೆ ಕಚೇರಿಯಿಂದ ಹೊರಟರೂ

ಮನೆಗೆ ತಲುಪಲು ಹೆಚ್ಚು

ಸಮಯ ಬೇಕಾಗುತ್ತದೆ. ಟ್ರಾಫಿಕ್​ನಲ್ಲೇ ಅರ್ಧ ಜೀವನ ಕಳೆಯುತ್ತಿರುವುದರಿಂದ ವೈಯಕ್ತಿಕ ಜೀವನದ ಮೇಲೆ ಸಮಯ ಕೊಡಲಾಗುತ್ತಿಲ್ಲ. ಬದಲಾಗಿ ಮತ್ತೆ

ಮರುದಿನ ಕಚೇರಿಗೆ ತಡವಾಗಿ ಬರುವಂತಾಗುತ್ತದೆ. ಮಳೆ ಅಥವಾ ಅಪಘಾತ ಮತ್ತೇನೋ ಕಾರಣಗಳಿಂದ ಟ್ರಾಫಿಕ್​ ಉಂಟಾಗಿದೆ ಎನ್ನುವ ಕಾರಣ ಇಲ್ಲದಿದ್ದರೂ ಸಹ ಬೆಂಗಳೂರಿನಲ್ಲಿ

ಮಧ್ಯಾಹ್ನ 4 ಗಂಟೆಗೆ ವೈಟ್‌ಫೀಲ್ಡ್‌ನಿಂದ ಎಚ್‌ಎಸ್‌ಆರ್‌ ಲೇಔಟ್​ಗೆ 17 ಕಿ.ಮೀ ದೂರ ಪ್ರಯಾಣಿಸುವಾಗಲೂ 2 ಗಂಟೆ ಬೇಕಾಗುತ್ತದೆ' ಎಂದು ಹೇಳಿದರು.

'ನಾವು ಈ ನಗರದಲ್ಲಿದ್ದುಕೊಂಡು ಒಳ್ಳೆ ಕೆಲಸ ಮಾಡುವ ಸಾಮರ್ಥ್ಯ ಅಥವಾ ಹುಮ್ಮಸ್ಸನ್ನು ಟ್ರಾಫಿಕ್​ನಲ್ಲಿ ಕಳೆಯುವ ಆಯಾಸದಿಂದಲೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಸುತ್ತಲೂ ಪ್ರತಿ ದಿನ ಇಷ್ಟೊಂದು ಶಬ್ಧ ಮತ್ತು ಗದ್ದಲದಿಂದ ತುಂಬಿ ಹೋಗಿರುತ್ತದೆ ಎನ್ನುವುದನ್ನು ಯೋಚಿಸುವಷ್ಟು ನಮಗೆ ಸಮಯ ಇರೋದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ನೆಟ್ಟಿಗರು ಏನಂದ್ರು?

ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಉದ್ಯೋಗಿಗಳ ಉತ್ಪಾದಕತೆ ಮತ್ತು ಸಾಮರ್ಥ್ಯ ನಾಶವಾಗುತ್ತಿದೆ ಎಂದು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಈ ಮಾತಿಗೆ ಧ್ವನಿಗೂಡಿಸಿದ್ದಾರೆ, (ಏಜೆನ್ಸೀಸ್).