ಮುಳಬಾಗಿಲು Water ತಾಲೂಕು ನಂಗಲಿ ರಾಷ್ಟ್ರೀಯ ಹೆದ್ದಾರಿ -75 ಅನ್ನು ರೈತ ಸಂ ಸಂಕೇತಿಕವಾಗಿ ಬಂದ್​ ಮಾಡಿ ತಹಸೀಲ್ದಾರ್​ ವಿ.ಗೀತಾ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 
ರಾಜ್ಯ

ಕೋಲಾರಕ್ಕೆ 14.5 ಟಿಎಂಸಿ ನೀರು ಹರಿಸಿ Water

ಪ್ರಮುಖ ಮುಖ್ಯಾಂಶಗಳು

  • ರೈತ ಸಂದಿಂದ ಒತ್ತಾಯ
ಮುಳಬಾಗಿಲು: ಪಕ್ಕದ ಆಂಧ್ರಪ್ರದೇಶಕ್ಕೆ ಹರಿಯುತ್ತಿರುವ ಕೃಷ್ಣಾನದಿ ನೀರಿನಲ್ಲಿ 14.5 ಟಿಎಂಸಿ ನೀರನ್ನು ಜಿಲ್ಲೆಗೆ ಹರಿಸಬೇಕು. ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘ ಸಾಂಕೇತಿಕವಾಗಿ ನಂಗಲಿ ಗಡಿಯಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಬಂದ್​ ಮಾಡಿ ತಹಸೀಲ್ದಾರ್​ ವಿ. ಗೀತಾ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಮಳೆಗಾಲದಲ್ಲಿ ಕೆರೆ, ಕುಂಟೆಗಳು ತುಂಬಿ ವ್ಯರ್ಥವಾಗಿ ಆಂಧ್ರ, ತಮಿಳುನಾಡಿಗೆ ಹರಿಯುವ ನೀರಿಗೆ ಚೆಕ್​ ಡ್ಯಾಂ ನಿರ್ಮಿಸಿ ಜಿಲ್ಲೆಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.
ಆಂಧ್ರ ಸರ್ಕಾರ ಕೃಷ್ಣಾನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಾಲುವೆ ಮುಖಾಂತರ ನೀರು ಹರಿಸುತ್ತಿದೆ. ನಮ್ಮ ಸರ್ಕಾರ ಬಯಲು ಸೀಮೆ ಕೋಲಾರಕ್ಕೆ ನೀರು ಹರಿಸುತ್ತಿಲ್ಲ ಎಂದು ಸಂಘದ ಉಪಾಧ್ಯಕ್ಷ ಕೆ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಜನ ಪ್ರತಿನಿಧಿಗಳು ಕೆಸಿ ವ್ಯಾಲಿ, ಎತ್ತಿನಹೊಳೆ ನೀರಾವರಿ ಯೋಜನೆ ಹೆಸರಲ್ಲಿ ಜನರನ್ನು ದಿಕ್ಕುತಪ್ಪಿಸಿ ಬೆಂಗಳೂರಿನ ತ್ಯಾಜ್ಯನಿರನ್ನು ಕೋಲಾರದ ಕೆರೆಗಳಿಗೆ ಹರಿಸುತ್ತಿದ್ದಾರೆ. ಕೆಸಿವ್ಯಾಲಿ ಜಿಲ್ಲೆಗೆ ಹರಿದ ನಂತರ ಟೊಮ್ಯಾಟೊ ಮತ್ತಿತರ ಬೆಳೆಗಳಿಗೆ ಬಾಧಿಸುತ್ತಿರುವ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ ಮಾತನಾಡಿ, ಕೃಷ್ಣಾನದಿ ನೀರಿನಲ್ಲಿ ನಮ್ಮ ಪಾಲು ಸಿಗಬೇಕು. ಇಲ್ಲದಿದ್ದರೆ ಕರ್ನಾಟಕದ ಭೂಪಟದಲ್ಲಿ ಕೋಲಾರ ಜಿಲ್ಲೆ ಇಲ್ಲವೆಂದು ಪಕ್ಕದ ಆಂಧ್ರಕ್ಕೆ ಸೇರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ವ್ಯಂಗ್ಯವಾಡಿದರು.
ಮಳೆ ನೀರು ಸಂಗ್ರಹಿಸಲು ಸಮರ್ಪಕವಾದ ಚೆಕ್​ ಡ್ಯಾಂ ಇಲ್ಲದೆ ಮಳೆ ನೀರು ಆಂಧ್ರ ಮತ್ತು ತಮಿಳುನಾಡು ಸೇರುತ್ತಿದ್ದು, ಅಲ್ಲಿನ ಸರ್ಕಾರಗಳು ಕೋಲಾರ ಜಿಲ್ಲೆ ನೀರನ್ನು ಸಮಪರ್ಕವಾಗಿ ಬಳಸಿಕೊಳ್ಳುತ್ತಿದೆ ಎಂದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ಹಿರಿಯ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ತಲುಪಿಸುವ ಭರವಸೆ ನೀಡಿದರು.
ನಂಗಲಿ ಕಿಶೋರ್​, ಮಣಿ, ಮಂಗಸಂದ್ರ ತಿಮ್ಮಣ್ಣ, ರಾಮಕೃಷ್ಣಪ್ಪ, ಗಣೇಶ್​, ನಂಗಲಿ ನಾಗೇಶ್​, ಪದ್ಮಘಟ್ಟ ಧರ್ಮ, ರಾಮಪ್ಪ, ನಾರಾಯಣಪ್ಪ, ಶಶಿ, ಮಂಜುನಾಥ, ಪುತ್ತೇರಿ ರಾಜು, ಚಲಪತಿ, ಗಿರೀಶ್​, ನವೀನ್​ ಶಿವು, ವೇಣು, ಕೇಶವ, ನಾಗೇಂದ್ರ, ಮುನಿರಾಜು, ಭೂಪತಿ. ಶ್ರೀಕಾಂತ್​, ಸುಧಾಕರ್​, ಮಂಜುನಾಥ್​ ಇದ್ದರು.
ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್​, ತಾಲೂಕು ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್​, ಮುಖಂಡರಾದ ಬಂಗಾರಿ ಮಂಜುನಾಥ್​, ರಾಜೇಶ್​, ಾರುಖ್​ ಪಾಷಾ, ನಾಗರಾಜ, ಜುಬೇರ ಪಾಷಾ, ಅಜಯ್​ ಇದ್ದರು.