ಪ್ರಮುಖ ಮುಖ್ಯಾಂಶಗಳು
ಯಾದಗಿರಿ: ಖಚಿತ ಮಾಹಿತಿ ಮೇರೆಗೆ ತಾಲೂಕಿನ ಸೈದಾಪುರ ಗ್ರಾಮದ ಅಂಗಡಿಯೊAದರ ಮೇಲೆ ಶುಕ್ರವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಽಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟ ೧೪.೪೭ ಕ್ವಿಂಟಾಲï ಪಡಿತರ ಆಹಾರ ಧಾನ್ಯ ವಶಪಡಿಸಿಕೊಂಡಿz್ದÁರೆ. ರಾಜು ದೊಡ್ಡಪ್ಪನವರ ಅವರ ಅಂಗಡಿಯಲ್ಲಿ ಪಡಿತರ ಆಹಾರ ಧಾನ್ಯ ಸಂಗ್ರಹಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ತಾಲೂಕು ಆಹಾರ ಶಿರಸ್ತೇದಾರ ಮಹೇಶ್ ಹಾಗೂ ಆಹಾರ ನಿರೀಕ್ಷಕಿ ರಾಜೇಶ್ವರಿ ಮತ್ತು ವಿಠ್ಠಲï ಬಂದಾಳ ಅವರ ನೇತೃತ್ವದ ತಂಡ ದಾಳಿ ನಡೆಸಿತು. ದಾಳಿಯ ವೇಳೆ ೯.೪೯ ಕ್ವಿಂಟಾಲï ಪಡಿತರ ಅಕ್ಕಿ ಹಾಗೂ ೪.೯೮ ಕ್ವಿಂಟಾಲï ಜೋಳ ಸೇರಿ ಒಟ್ಟು ೧೪.೪೭ ಕ್ವಿಂಟಾಲï ಆಹಾರ ಧಾನ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.