ಹೋಳಿ ಹಬ್ಬ 
ರಾಜ್ಯ

ಪರೀಕ್ಷೆಗೆ 1,311 ವಿದ್ಯಾರ್ಥಿಗಳು ಗೈರು

ಬೆಳಗಾವಿ: ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 95 ಕೇಂದ್ರಗಳಲ್ಲಿ ಮಂಗಳವಾರ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಸುಗಮವಾಗಿ ನಡೆದವು.
ಇಂಗ್ಲಿಷ್ ವಿಷಯ ಪರೀಕ್ಷೆಗೆ 48,505ರ ಪೈಕಿ 47,194 ವಿದ್ಯಾರ್ಥಿಗಳು ಹಾಜರಾಗಿದ್ದರೆ, 1,311 ಅಭ್ಯರ್ಥಿಗಳು ಗೈರಾಗಿದ್ದರು. ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ಭಾಗದಲ್ಲಿ ಅಲ್ಲಲ್ಲಿ ಹೋಳಿ ಹಬ್ಬ ಆಚರಣೆ ಹಿನ್ನೆಲೆ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದ್ದರಿಂದ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳು ಪರದಾಡಿದರು.
ಕೆಲವೆಡೆ ಖಾಸಗಿ ಆಟೋ, ವಾಹನದ ಮೂಲಕ ಬಂದು ಪರೀಕ್ಷೆ ಬರೆದರು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.