Raghav Chaitanay 
ರಾಜ್ಯ

ರಾಘವ ಚೈತನ್ಯ ಪೂಜೆಗೆ 13 ಜನರಿಗೆ ಅವಕಾಶ : ಹೈಕೋರ್ಟ್​ ಆದೇಶ

ಕಲಬುರಗಿ: ವಿವಾದಿತ ಆಳಂದದ ಲಾಡ್ಲೇಮಶಾಕ್​ ದರ್ಗಾದಲ್ಲಿನ ರಾವಚೈತನ್ಯ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ಸಲ್ಲಿಸಲು 13 ಜನರಿಗೆ ಅವಕಾಶ ನೀಡಿ, ಹೈಕೋರ್ಟ್​ ಆದೇಶಿಸಿದೆ.
ಪೂಜೆಗೆ ಅವಕಾಶ ಕೋರಿ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೇರಿ ಇತರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಅವಕಾಶ ನೀಡಿರಲಿಲ್ಲ. ಆದ್ದರಿಂದ ಪೂಜೆಗೆ ಅವಕಾಶ ಕೋರಿ ಹೈಕೋರ್ಟ್​ ಮೊರೆ ಹೋಗಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್​ ಶುಕ್ರವಾರ 13 ಜನರಿಗೆ ಪೂಜೆಗೆ ಅವಕಾಶ ನೀಡಿ, ಆದೇಶಿಸಿದೆ.
ಈ ಮೊದಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ ಹಿರೇಮಠ ಜತೆಗೆ ಇಂದಿನ ಅರ್ಜಿಯಲ್ಲಿ ಹೆಸರಿದ್ದ 14 ಜನರ ಪೈಕಿ, 13 ಜನರಿಗೆ ಅವಕಾಶ ಕಲ್ಪಿಸಿದೆ. ಇದರಿಂದ ಮಹಾಶಿವರಾತ್ರಿಯದು ಮಧ್ಯಾಹ್ನ 2ರಿಂದ ರಾತ್ರಿ 8ರ ವರೆಗೆ ಪೂಜೆ ಸಲ್ಲಿಸಬಹುದಾಗಿದೆ.
ಅರ್ಜಿಯಲ್ಲಿ ಕಡಗಂಚಿ ವೀರಭದ್ರ ಶಿವಾಚಾರ್ಯರ ಆಧಾರ್​ ಕಾರ್ಡ್​ ಇಲ್ಲದ ಕಾರಣ ಅವರಿಗೆ ಅವಕಾಶ ಸಿಕ್ಕಿಲ್ಲ. ಶುಕ್ರವಾರ ೆ.12ರಂದು ಸುಪ್ರೀಂ ಕೋರ್ಟ್​ ಪೂಜೆಗೆ ತಡೆ ನೀಡುವಂತೆ ಹಾಕಿದ್ದ ಅರ್ಜಿ ವಜಾ ಮಾಡಿತ್ತು. ಇದರ ಜತೆಗೆ ಶಿವಸೇನಾ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ ಜಿಲ್ಲಾಧಿಕಾರಿಗಳಿಗೆ 14 ಜನರಿಗೆ ಪೂಜೆಗೆ ಅವಕಾಶ ನೀಡುವಂತೆ ಮನವಿ ನೀಡಿದ್ದರು. ಇಡೀ ದಿನ ಜಿಲ್ಲಾಧಿಕಾರಿ ಕಚೇರಿಯಿಂದ ಸೂಚನೆ ಬಾರದ ಹಿನ್ನೆಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಕಲಬುರಗಿ ಹೈ ಕೋರ್ಟ್​ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.