Health Minister U T Kadhan
- * ವಿಧಾನಸೌಧದ ಎದುರು ಬೆಳಗ್ಗೆ ರಾಜ್ಯಪಾಲದಿಂದ ಚಾಲನೆ
- * ಆಯುಷ್ ಸಂಸ್ಥೆಗಳಲ್ಲಿ 365 ದಿನಗಳೂ ವಿಶೇಷ ಯೋಗ ಶಿಬಿರ
ಬೆಂಗಳೂರು: ರಾಜ್ಯಾದ್ಯಂತ 12ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಸಂಬಂಧ ಆಯುಷ್ ಇಲಾಖೆಯು ಭಾನುವಾರ (ಜೂ. 21) ಬೆಳಗ್ಗೆ 7ಕ್ಕೆ ವಿಧಾನಸೌಧದ ಮುಂಭಾಗ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ’ ೋಷವಾಕ್ಯದಡಿ ಯೋಗಾಭ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ರಾಜ್ಯಮಟ್ಟದ ಈ ಕಾರ್ಯಕ್ರಮದಲ್ಲಿ 40 ನಿಮಿಷಗಳಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ಎರಡು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ನಟಿಯಾದ ಸುಧಾರಾಣಿ, ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಯಾ ಇತರರು ಭಾಗವಹಿಲಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ನಿತ್ಯ ಯೋಗ:
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯಾದ್ಯಂತ 10 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯೋಗಾಭ್ಯಾಸವನ್ನು ಒಂದು ದಿನಕ್ಕೆ ಸೀಮಿತಗೊಳಿಸಿದೆ ನಿತ್ಯವೂ ಮಾಡಬೇಕಿದೆ. ಆದ್ದರಿಂದ ಈ ವರ್ಷ ‘ನಿತ್ಯ ಯೋಗ’ ಶೀರ್ಷಿಕೆಯಡಿ ಎಲ್ಲ ಆಯುಷ್ ಸಂಸ್ಥೆಗಳಲ್ಲಿ 365 ದಿನಗಳೂ ವಿಶೇಷ ಯೋಗ ಶಿಬಿರಗಳನ್ನು ಆಯೋಜಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಯೋಗ ದಿನಾಚರಣೆಯ ಪ್ರಯುಕ್ತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ‘ಕಾರ್ಸಿನೋ ಯೋಗ’ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ‘ ಕಾರ್ಡಿಯೋ ಯೋಗ’ ಸೇರಿ ವಿವಿಧೆಡೆ ಜುಲೈ ತಿಂಗಳಲ್ಲಿ ಯೋಗ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 360 ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಯೋಗ ಕಾರ್ಯಕ್ರಮ ಇಡೀ ವರ್ಷ ನಡೆಯಲಿದೆ ಎಂದರು.
ಯೋಗಾಸಕ್ತಿ ಹೆಚ್ಚಿಸಲು ಕ್ರಮ:
ಯುವಜನರಿಗೆ ಯೋಗದ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಅದರ ಮಹತ್ವ ತಿಳಿಸಲು ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಧ ಸ್ಪರ್ಧೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತ್ವಿಕ ರಂಜನಂ ಪಾಂಡೆ, ಆಯುಕ್ತ ಗುರುದತ್ತ ಹೆಗಡೆ, ಆಯುಷ್ ಇಲಾಖೆಯ ಆಯುಕ್ತ ಸುನೀಲ್ ಪನ್ವಾರ್ ಇತರರು ಇದ್ದರು.