ನೆಲಮಂಗಲದ ಪವಾಡಶ್ರೀ ಬಸವಣ್ಣದೇವರಮಠದಲ್ಲಿ ಬಸವಜಯಂತಿ ಆಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ಧ ಪೂರ್ವಭಾವಿ ಸಭೆಯಲ್ಲಿ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ವೀರಶೈವಲಿಂಗಾಯತ ಸಂಘಟನೆಗಳ ಜತೆಗೆ ಇತರೆ ಸಂಘಟನೆಗಳ ಪದಾಧಿಕಾರಿ ಇದ್ದರು.  
ರಾಜ್ಯ

ಇಂದು ನೆಲಮಂಗಲದಲ್ಲಿ 1000 ವಚನ ಕಂಠಪಾಠ ಸ್ಪರ್ಧೆ / NELAMANGAL

ನೆಲಮಂಗಲ : ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಏ.20ರಂದು ಬಸವಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ತಿಳಿಸಿದರು.
ಮಠದ ಆವರಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮುದಾಯ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬಸವಜಯಂತಿ ಪ್ರಯುಕ್ತ ಏ.19ರಂದು ಬೆಳಗ್ಗೆ 9 ಗಂಟೆಗೆ ರಾಷ್ಟ್ರಮಟ್ಟದ 1000 ವಚನ ಕಂಠಪಾಠ ಸ್ಪರ್ಧೆ ಆಯೋಜಿಸುತ್ತಿದ್ದು, ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಲಿದ್ದು, ಬೆಳಗಾವಿ ಸೇರಿ ವಿವಿಧ ಜಿಲ್ಲೆ 280 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರಥಮ ಬಹುಮಾನ 1 ಲಕ್ಷ ರೂಪಾಯಿ, ದ್ವೀತಿಯ 75ಸಾವಿರ, ತೃತೀಯ 50 ಸಾವಿರ ರೂ. ಹಾಗೂ ಮೂರು ಸಮಾಧಾನಕರ ಬಹುಮಾನವಾಗಿ 10 ಸಾವಿರ ರೂ. ನೀಡಲಾಗುವುದು ಎಂದು ಸಂಸತ ಶಿಕ್ಷಕ ಅಭಿಲಾಷ್​ ಶಾಸ್ತ್ರೀ ಮಾಹಿತಿ ನೀಡಿದರು.
ರಥೋತ್ಸವ : ಬಸವಜಯಂತಿ ಪ್ರಯುಕ್ತ ಏ.20ರಂದು ಬೆಳಗ್ಗೆ 7.30ಕ್ಕೆ ಚಕ್ರಬಾವಿ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ಷಟ್​ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. 9 ಗಂಟೆಗೆ ಕ್ಷೇತ್ರಾಧಿಪತಿ ಪವಾಡ ಶ್ರೀ ಬಸವಣ್ಣದೇವರ ರಥೋತ್ಸವ ನಡೆಯಲಿದ್ದು, ನಾಡಿನ ವಿವಿಧ ಮಠಗಳ ಮಠಾಧೀಶರು ಚಾಲನೆ ನೀಡಲಿದ್ದಾರೆ.
ನಗರಸಭೆ ಸದಸ್ಯ ಸಿ.ಪ್ರದಿಪ್​, ಅಖಿಲಭಾರತ ವೀರಶೈವಲಿಂಗಾಯತ ಸಭಾ ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ಎನ್​.ರಾಜಶೇಖರ್​, ಮಾಜಿ ಅಧ್ಯಕ್ಷ ನಿವೃತ್ತ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ನಾಗರಾಜು, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪರಮೇಶ್​.ಬಿ.ಅದರಂಗಿ, ಭಾಜಪ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕೆ.ಪಿ.ಬೃಂಗೀಶ್​, ರೋಟರಿ ಮಾಜಿ ಅಧ್ಯಕ್ಷ ವಕೀಲ ಮಂಜುನಾಥ್​, ಪ್ರಧಾನ ಕಾರ್ಯದರ್ಶಿ ರವಿಕುಮಾರ್​, ನಿರ್ದೇಶಕ ಶಿವಶಂಕರ್​, ವಿಕಾಸಂಸ್ಥೆ ನಾಗರಾಜು, ಮುಖಂಡ ಹರೀಶ್​, ಪುನೀತ್​, ಗಿರೀಶ್​, ಕನ್ನಡ ಸಾಂಸತಿಕ ವೇದಿಕೆ ಡಿ.ಸಿದ್ದರಾಜು, ಶೀಲಾಶಿವಶಂಕರ್​ ಇದ್ದರು.
ಪವಾಡಶ್ರೀ ಪ್ರಶಸ್ತಿ ಪ್ರದಾನ : ಶ್ರೀಮಠದಿಂದ ನೀಡುವ ಪವಾಡ ಶ್ರೀ ಪ್ರಶಸ್ತಿಗೆ ಈ ಬಾರಿ ಕ್ಯಾನ್ಸರ್​ ಹಿರಿಯ ತಜ್ಞೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸತೆ ಡಾ. ವಿಜಯಲಕ್ಷಿ$್ಮ ದೇಶಮಾನೆ ಭಾಜನರಾಗಿದ್ದಾರೆ.
ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ಇಸ್ರೋ ವಿಶ್ರಾಂತ ಅಧ್ಯಕ್ಷ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸತ ಎ.ಎಸ್​.ಕಿರಣ್​ಕುಮಾರ್​ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಶಾಸಕ ಎನ್​.ಶ್ರೀನಿವಾಸ್​ ಅಧ್ಯಕ್ಷತೆ ವಹಿಸಲಿದ್ದಾರೆ. ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್​ ಶಿವಾಷ್ಟೋತ್ತರತವನಿಧಿ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ನಿವೃತ್ತ ವೀರಶೈವಲಿಂಗಾಯತ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ಷಣ್ಮುಕಪ್ಪ ಮಾಹಿತಿ ನೀಡಿದರು.
ಬೃಹತ್​ ಮೆರವಣಿಗೆ : 20ರಂದು ಸಂಜೆ 4 ಗಂಟೆಗೆ ಜಗಜ್ಯೋತಿ ಬಸವೇಶ್ವರರ ಉತ್ಸವ ಮೂರ್ತಿ ಮೆರವಣಿಗೆ ಇರಲಿದ್ದು, ಜಾನಪದ ಕಲಾತಂಡಗಳು ಮೆರಗು ನೀಡಲಿವೆ.