ನಾರಾಯಣ ಹೆಲ್ತ್ ಸಿಟಿ  
ರಾಜ್ಯ

ರೋಬಾಟಿಕ್‌ನಿಂದ ತಿಂಗಳಲ್ಲಿ 100 ಹೃದಯ ಶಸ್ತ್ರಚಿಕಿತ್ಸೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ನಾರಾಯಣ ಹೆಲ್ತ್ ಸಿಟಿ ವೈದ್ಯರ ಸಾಧನೆ
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಾಧನೆಗಳ ಮೂಲಕ ಹೆಸರಾಗಿರುವ ನಾರಾಯಣ ಹೆಲ್ತ್ ಸಿಟಿ ಇದೀಗ ತಿಂಗಳ ಅವಧಿಯಲ್ಲಿ ರೋಬಾಟಿಕ್ ಮೂಲಕ 100ಕ್ಕೂ ಅಧಿಕ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದರೊಂದಿಗೆ ಆಸ್ಪತ್ರೆ ತನ್ನ ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ಕ್ಲಿನಿಕಲ್ ನಿಖರತೆಯನ್ನು ಸಾರಿದ್ದು, ರೋಬಾಟಿಕ್ ತಂತ್ರಜ್ಞಾನದ ಅಳವಡಿಕೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.
ರೋಬಾಟಿಕ್ ಮೂಲಕ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರಲ್ಲಿ ಶೇ.35 ಕರ್ನಾಟಕದವರಾದರು ಎಂಬುದು ಗಮನಾರ್ಹ. ತಮಿಳುನಾಡು- ಶೇ.15, ಪಶ್ಚಿಮ ಬಂಗಾಳ- ಶೇ.10, ಜಾರ್ಖಂಡ್- ಶೇ.8, ಅಸ್ಸಾಂ- ಶೇ.8, ಆಂಧ್ರ ಪ್ರದೇಶದ ಶೇ. 5 ಸೇರಿ ಮಧ್ಯಪ್ರದೇಶ, ಬಿಹಾರ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ತ್ರಿಪುರ ರಾಜ್ಯಗಳ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ನೆರೆಯ ಬಾಂಗ್ಲಾದೇಶ ಶೇ. 10 ರೋಗಿಗಳೂ ಈ ಯಾದಿಯಲ್ಲಿದ್ದಾರೆ.
ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಸರ್ಜರಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಎಂ. ಜಿ. ರಘು ಮಾತನಾಡಿ, ಈಗಾಗಲೆ ಬೈಪಾಸ್ ಶಸ್ತ್ರ ಚಿಕಿತ್ಸೆಗೆ ಒಳಗಾದವರಲ್ಲಿ ಸಾಂಪ್ರದಾಯಿಕ ವಿಧಾನದಂತೆ ಮತ್ತೆ ಎದೆಯನ್ನು ಸೀಳಿ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯಕಾರಿ. ಇದರಿಂದ ಮೊದಲೇ ಅಳವಡಿಸಲಾದ ರಕ್ತನಾಳಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರೋಬಾಟಿಕ್ ಮೂಲಕ ಕನಿಷ್ಠ ಆಕ್ರಮಕಾರಿ ವಿಧಾನ ಬಳಸಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.