ವಿಗ್ರಹಕ್ಕೆ ವಿಶೇಷ ಅಲಂಕಾರ Ekadashi
- ಪ್ರಸನ್ನ ವೆಂಕಟರಮಣಸ್ವಾಮಿಗೆ ವಿಶೇಷ ಪೂಜೆ
ಲಕ್ಕೂರು: ಪ್ರಸಿದ್ಧ ಯಾತ್ರಾಸ್ಥಳವಾದ ಚಿಕ್ಕತಿರುಪತಿಯ Ekadashi ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಮಂಗಳವಾರ ವೈಕುಂಠ ಏಕಾದಶಿ ಅಂಗವಾಗಿ ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
ಸಾಂಸತಿಕ ಭವ್ಯ ಪರಂಪರೆಯಲ್ಲಿ ವೈಕುಂಠ ಏಕಾದಶಿ ಉತ್ಸವ ಅತ್ಯಂತ ವೈಭವದಿಂದ ನಡೆಯಿತು. ದೇವರ ಮೂಲ ವಿಗ್ರಹವನ್ನು ವಿಶೇಷವಾಗಿ ತಿರುಮಂಜನ, ವಜ್ರ ವೈಡೂರ್ಯಭರಿತ ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ, ಹೂವುಗಳಿಂದ ಅಲಂಕರಿಸಿ ಉತ್ಸವ ಮೂರ್ತಿಗಳನ್ನು ಉತ್ತರ ಭಾಗದಲ್ಲಿರುವ ವೈಕುಂಠ ದ್ವಾರದಲ್ಲಿ ಪ್ರತಿಷ್ಠಾಪಿಸಲಾಯಿತು.
ಬೆಂಗಳೂರು ಉಪವಿಭಾಗಾಧಿಕಾರಿ ಮಂಜುನಾಥ, ಶಾಸಕ ಕೆ.ವೈ.ನಂಜೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ನಾಗೇಶ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಪ್ಪೂರು ಚನ್ನರಾಯಪ್ಪ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಹೂಡಿ ವಿಜಯ್ಕುಮಾರ್, ಮುಖಂಡರಾದ ಜಿ.ಇ,ರಾಮೇಗೌಡ, ದಿನೇಶ್ಗೌಡ, ಪಿಡಿಒ ಹರೀಂದ್ರಗೋಪಾಲ್, ಎಸ್ಡಿಎ ನಾಗರಾಜ್ ದರ್ಶನ ಪಡೆದರು.
ಭಕ್ತರಿಗೆ ಮೂಲ ಸೌಲಭ್ಯ ವ್ಯವಸ್ಥೆ: ಭಕ್ತರಿಗೆ ದೇವಾಲಯದಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸರತಿ ಸಾಲು ವ್ಯವಸ್ಥೆ, ದೇವಾಲಯದ ಆವರಣ ಹಾಗೂ ಮುಂಭಾಗದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿತ್ತು. ಪ್ರತ್ಯೇಕ 100 ರೂ.ಗೆ ಸರತಿ ಸಾಲು ನಿರ್ಮಿಸಿ ಲಾಡು ವಿತರಿಸಿದರು. ಅಹಿತಕರ ಘಟನೆ ನಡೆಯದಂತೆ 100ಕ್ಕೂ ಹೆಚ್ಚು ಆರಕ್ಷಕರು ನೇಮಕ ಮಾಡಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಭಕ್ತರಿಗೆ ಕುಡಿಯುವ ನೀರು, ಸ್ಥಾನದ ವ್ಯವಸ್ಥೆ ಶೌಚಗೃಹ ಸೇರಿ ಹಲವು ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು.
ಅನ್ನದಾಸೋಹ: ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಕೋಡಿಹಳ್ಳಿ ಕೃಷ್ಣಾರೆಡ್ಡಿ ಅವರಿಂದ ಪಲಾವ್, ಉಪ್ಪಿಟು, ಕೇಸರಿಬಾತ್ ಒಳಗೊಂಡ ಅನ್ನದಾಸೋಹ ನಡೆಯಿತು. ದೇವಾಲಯದ ಆವರಣದಲ್ಲಿ ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮದ ಭಕ್ತಾದಿಗಳಿಂದ ಕೋಲಾಟ, ಹಾಡುಗಾರಿಕೆ ಮುಂತಾದ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು.
ಹೋಬಳಿಯ ಕಾಡುಮುತ್ಸಂದ್ರ ಪ್ಲಾಂಟೇಷನ್ನಲ್ಲಿರುವ ಶ್ರೀ ಬಾಲಾಂಜನೇಯಸ್ವಾಮಿ, ತಾಳಕುಂಟೆಯ ಶ್ರೀ ತಿಮ್ಮರಾಯಸ್ವಾಮಿ, ಮಿಣಸಂದ್ರ ಗ್ರಾಮದ ಲಕ್ಷಿ$್ಮ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲೂ ವಿಜೃಂಭಣೆಯಿಂದ ಏಕಾದಶಿ ಜರುಗಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗೋಪಾಲ, ಸದಸ್ಯರಾದ ಡಿ.ಎಲ್.ತಿಮ್ಮರಾಯಪ್ಪ, ಭಾಗ್ಯಶ್ರೀ, ತೇಜಸ್ವಿನಿ, ವಿ.ಕೃಷ್ಣಮೂರ್ತಿ, ಶ್ರೀನಿವಾಸಯ್ಯ, ಕೃಷ್ಣಾರೆಡ್ಡಿ ಎನ್, ಟಿ.ವಿ.ಶ್ರೀನಿವಾಸನ್, ಪೇಷ್ಕಾರ್ ವಿ.ಚೆಲುವಸ್ವಾಮಿ ಇದ್ದರು.