ಎಂ.ಇ.ಎಸ್. ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ್ದ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಜಿ.ಬಿ.ಹರೀಶ್ ಮಾತನಾಡಿದರು. ಭ.ರಾ.ವಿಜಯಕುಮಾರ ಉಪಸ್ಥಿತರಿದ್ದರು.  
ರಾಜ್ಯ

ವೇದ ಸಾರವನ್ನು ಸರಳವಾಗಿ ಉಣಬಡಿಸಿದ ಬೇಂದ್ರೆ; ಡಾ. ಜಿ.ಬಿ.ಹರೀಶ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ವೇದಗಳಲ್ಲಿ ಅಡಗಿರುವ ಆಳವಾದ ಅರ್ಥ
  • ಕನ್ನಡದಲ್ಲಿ ಕಟ್ಟಿಕೊಟ್ಟ ದ.ರಾ. ಬೆಂದ್ರೆ
  • ನಾಕುತಂತಿ ಷಷ್ಠಿಪೂರ್ತಿ ಸರಣಿ

ಬೆಂಗಳೂರು:ವೇದಗಳಲ್ಲಿಅಡಗಿರುವ ಆಳವಾದ ಅರ್ಥವನ್ನುಅತ್ಯಂತ ಸರಳವಾಗಿ,ಕನ್ನಡದಲ್ಲಿಕಟ್ಟಿಕೊಟ್ಟ ದ.ರಾ.ಬೆಂದ್ರೆವಿಶ್ವಮಟ್ಟದ ಕವಿ ಎಂದು ಕಾದಂಬರಿಕಾರಡಾ.ಜಿ.ಬಿ.ಹರೀಶತಿಳಿಸಿದರು.

ಎಂ..ಎಸ್.ಕಲಾವೇದಿಸಹಯೋಗದಲ್ಲಿ ವಿದ್ಯಾರಣ್ಯಪುರದಎಂ..ಎಸ್.ಕಾಲೇಜಿನಲ್ಲಿಅಖಿಲ ಭಾರತೀಯ ಸಾಹಿತ್ಯ ಪರಿಷದ್ಆಯೋಜಿಸಿದ್ದ ನಾಕುತಂತಿ ಷಷ್ಟಿಪೂರ್ತಿಸರಣಿಯ ‘ನಾದ-10’ಕಾರ್ಯಕ್ರಮದಲ್ಲಿಮಾತನಾಡಿದರು.

ಅತ್ಯಂತಚಿಕ್ಕ ಚಿಕ್ಕ ಸಾಲುಗಳಲ್ಲಿನಾಗರಿಕತೆಯ ಉಗಮದಿಂದ ಪ್ರಸ್ತುತಜಗತ್ತಿನವರೆಗೆ ಎಲ್ಲ ವಿಚಾರಗಳನ್ನೂಬೇಂದ್ರೆ ಕಟ್ಟಿಕೊಟ್ಟಿದ್ದಾರೆ.ಶೃತಿಗಳಿಗೆಕಿವಿಗೊಡದೆ,ಮಂತ್ರಗಳಿಂದದೂರವಾಗುತ್ತಿರುವ ನಾಗರಿಕತೆಯುಶಾಂತಿಯ ಹುಡುಕಾಟದಲ್ಲಿದೆ ಎಂದುಬೇಂದ್ರೆ ಬೇಸರ ವ್ಯಕ್ತಪಡಿಸಿದ್ದಾರೆ. ಮಾನವರು ಕೊಟ್ಟಮಾತು ಮುರಿಯುತ್ತ,ಹೊಟ್ಟೆಕಿಚ್ಚುಪಡುತ್ತಾನಿರ್ಬುದ್ಧ ಸ್ಥಿತಿಯತ್ತಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಕನ್ನಡದಲ್ಲಿಅತಿ ಹೆಚ್ಚು ಭಜನಾ ಪದ್ಯಗಳನ್ನುಬೇಂದ್ರೆ ಬರೆದಿದ್ದಾರೆ.ಶ್ರಾವಣದಿಂದಚೈತ್ರದವರೆಗೆ,ಪಶ್ಚಿಮದಿಂದಪೂರ್ದವರೆಗೆ,ಸೂರ್ಯನಿಂದಚಂದ್ರನವರೆಗೆ ಅವರ ಕಾವ್ಯಸುಧೆಹರಿದಿದೆ. ವೇದಗಳಸಾರವನ್ನು ಅತ್ಯಂತ ಸರಳವಾಗಿನಮಗೆಲ್ಲ ಉಣಬಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿಅಭಾಸಾಪ ಕರ್ನಾಟಕ ಸಹ ಖಜಾಂಚಿಭ.ರಾ.ವಿಜಯಕುಮಾರ್ಉಪಸ್ಥಿತರಿದ್ದರು.