ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕೇಂದ್ರದ ಮಾಜಿಸಚಿವ ದಿವಂಗತ ಅನಂತ್ ಕುಮಾರ್ಕೇವಲ ಭಾಷಣ,ಬಣ್ಣನೆಗಳಿಂದಗುರುತಿಸಿಕೊಳ್ಳದೆ ರಾಷ್ಟ್ರಪ್ರೇಮ,ದೇಶ ಸೇವೆಗೆತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿದ್ದರು.ಅನಂತ ಕುಮಾರ್ಯುವ ಜನಾಂಗಕ್ಕೆ ಮಾದರಿ ಮತ್ತುದಾರಿದೀಪ ಎಂದು ಮಾಜಿ ಸಿಎಂಡಿ.ವಿ.ಸದಾನಂದಗೌಡ ಬಣ್ಣಿಸಿದ್ದಾರೆ.
ಅನಂತ್ಕುಮಾರ್ ಪುಣ್ಯತಿಥಿ ಅಂಗವಾಗಿನಗರದ ಸೌತೆಂಡ್ ವೃತ್ತದಲ್ಲಿಹಮ್ಮಿಕೊಂಡಿದ್ದ ಅನಂತ ಸ್ಮತಿಕಾರ್ಯಕ್ರಮದಲ್ಲಿ ಪಂಚಿನ ಮೆರವಣಿಗೆಗೆಚಾಲನೆ ನೀಡಿ ಮಾತನಾಡಿದರು.
ಅನಂತಕುಮಾರ್ದೇಶ ಕಂಡ ಸವೋತ್ಕೃಷ್ಟ ನಾಯಕವಾಜಪೇಯಿ ಸಂಪುಟದಲ್ಲಿ ಸಚಿವರಾಗಿಇಡೀ ದೇಶದ ಗಮನ ಸೆಳೆಯುವಂತೆ ಕೆಲಸಮಾಡಿದ್ದರು.ರಾಜಕೀಯದಲ್ಲಿಛಲ, ದೇಶಪ್ರೇಮ,ಅಭಿವೃದ್ಧಿ,ಸಮಾಜಪರ ಚಿಂತನೆಗಳನ್ನುಮೈಗೂಡಿಸಿಕೊಂಡು,ಹಲವು ಯುವರಾಜಕಾರಣಿಗಳಿಗೆ ಮಾರ್ಗದರ್ಶನಮಾಡಿದ್ದಾರೆ.ಇಂದು ದೇಶದಲ್ಲಿಹಲವು ರಾಜ್ಯಗಳಲ್ಲಿ ಬಿಜೆಪಿಅಧಿಕಾರದಲ್ಲಿದೆ.ಒಂದು ಕಾಲದಲ್ಲಿಕರ್ನಾಟಕದ ಬಿಜೆಪಿ ಅಧ್ಯಕ್ಷರಾಗಿಇದ್ದ ಸ್ಥಾನಗಳನ್ನು ಎರಡು ಪಟ್ಟುಹೆಚ್ಚು ಮಾಡಿ,ಅಧಿಕಾರಕ್ಕೆಅಡಿಪಾಯ ಹಾಕಿದವರು ಅನಂತ್ ಕುಮಾರ್.ಇಂತಹ ಶುದ್ಧಹಸ್ತದಪ್ರಮಾಣಿಕ ರಾಜಕಾರಣಿಯ ಬದುಕಿನವಿವಿಧ ಮಜಲುಗಳನ್ನು ಇಂದಿನಜನಾಂಗಕ್ಕೆ ತಿಳಿಸುವುದಕ್ಕೆಇಂತಹ ಕಾರ್ಯಕ್ರಮ ಅತ್ಯವಶ್ಯಕಎಂದು ಡಿವಿಎಸ್ ಹೇಳಿದರು.
ಪಂಚಿನಮೆರವಣಿಗೆಯಲ್ಲಿ ಶಾಸಕರಾದಸಿ.ಕೆ.ರಾಮಮೂರ್ತಿ,ಉದಯ ಗರುಡಾಚಾರ್,ಬಿಜೆಪಿ ಮುಖಂಡರಾದರಘುನಾಥ ಮಲ್ಕಾಪುರೆ,ಜಗದೀಶ ಹಿರೇಮನಿ,ನೂರಾರು ಕಾರ್ಯಕರ್ತರು,ಅಭಿಮಾನಿಗಳು,ವಿದ್ಯಾರ್ಥಿಗಳುಪಾಲ್ಗೊಂಡಿದ್ದರು.
ಅನಂತ್ ಕುಮಾರ್ ಅವರು ಸತತ 6 ಬಾರಿ ಲೋಕಸಭಾ ಸದಸ್ಯರಾಗಿ, ಸಚಿವರಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ಸ್ಮರಣೆಗಾಗಿ ಪ್ರತಿವರ್ಷ ಪಂಜಿನ ಮೆರವಣಿಗೆಯಲ್ಲಿ ಒಂದೊಂದು ವಿಷಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ ಕನ್ನಡ ನಾಡನ್ನು ಆಳಿದ ಎಲ್ಲ ರಾಜ-ಮಹಾರಾಜರು, ರಾಣಿಯರ ಭಾವಚಿತ್ರಗಳನ್ನು ಪ್ರದರ್ಶನ ಮಾಡಿ ಅವರ ಕೊಡುಗೆಯನ್ನು ಸ್ಮರಿಸಲಾಗಿದೆ.