ರಾಮದುರ್ಗದ ತ್ತೇಪೂರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಉದ್ಘಾಟಿಸಿದರು. ಸುನೀಲಕುಮಾರ ದೊಡಮನಿ, ಅಜಯ ಮುದಕವಿ ಇತರರಿದ್ದರು. 
ರಾಜ್ಯ

ಎಲ್ಲರಿಗೂ ಕಾನೂನು ಅರಿವು ಅಗತ್ಯ

ಎಂ.ಎಸ್​.ಹಿರೇಮಠ ಬೆಳಗಾವಿ
ರಾಮದುರ್ಗ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗದೆ ಕಾನೂನು ಅರಿತುಕೊಂಡಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ದಿವಾಣಿ ನ್ಯಾಯಾಧೀಶ ಮಂಜುನಾಥ ಬಣಕಾರ ಹೇಳಿದರು.
ಪಟ್ಟಣದ ಸವಿತಾ ಶ್ರೀಧರ ತ್ತೇಪೂರ ಪಪೂ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ನ್ಯಾಯವಾದಿಗಳ ಸಂದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕೀಲ ಸುನೀಲಕುಮಾರ ದೊಡಮನಿ, ವಕೀಲರ ಸಂದ ಅಧ್ಯ ಅಜಯ ಮುದಕವಿ, ಸಹಾಯಕ ಸರ್ಕಾರಿ ಅಭಿಯೋಜಕ ಡಿ.ಎಂ.ನದ್​ಾ ಮಾತನಾಡಿದರು. ತ್ತೇಪೂರ ಗ್ರಾಮೀಣ ವಿದ್ಯಾವರ್ಧಕ ಸಂದ ಅಧ್ಯ ಶ್ರೀಧರ ತ್ತೇಪೂರ, ಎಎಸ್​ಐ ಯರಗಟ್ಟಿ, ಆಡಳಿತಾಧಿಕಾರಿ ಈ.ಬಿ.ವಡವಡಗಿ, ಪ್ರಾಚಾರ್ಯ ಜಿ.ಎಸ್​.ಮೊಹಿತೆ ಇತರರಿದ್ದರು.