ಕಟಕೋಳದ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ನಾಡಗೀತೆ ನೂರರ ಸಂಭ್ರಮದ ಕಾರ್ಯಕ್ರಮದಲ್ಲಿ ಗಣ್ಯರು ನಾಡಗೀತೆ ಹಾಡಿದರು. ಪಿ.ಎನ್.ಅಂಬಲಿ, ಬಸವರಾಜ ನಾಗಮ್ಮನವರ, ಸುರೇಶ ಪೂಜೇರ, ನವೀನ ಪಟಾತ ಇತರರಿದ್ದರು
ರಾಮದುರ್ಗ: ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾಡಿನ ಕಲೆ, ಸಾಹಿತ್ಯ, ಜನಪದ ಪರಂಪರೆ ಜಾಗತಿಕ ಮಟ್ಟದಲ್ಲಿ ಮೇರು ಸ್ಥಾನದಲ್ಲಿದೆ. ಭಾಷೆಯ ಶ್ರೀಮಂತಿಕೆ ಅಲ್ಲಗಳೆಯುವಂತಿಲ್ಲ ಎಂದು ಕನ್ನಡ ಪ್ರಾಧ್ಯಾಪಕ ಪಿ.ಎನ್.ಅಂಬಲಿ ಹೇಳಿದರು.
ತಾಲೂಕಿನ ಕಸಾಪ ತಾಲೂಕು ಟಕದ ನೇತೃತ್ವದಲ್ಲಿ ಕಟಕೋಳ ಆದರ್ಶ ವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಡಗೀತೆಯ ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಇತಿಹಾಸ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡ ಭಾಷೆ ಸಾಹಿತ್ಯ, ಸಂಸತಿಯ ಅಧ್ಯಯನದ ಬಗೆಗೆ ಪ್ರತಿಯೊಬ್ಬರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ವೈ.ವಿ.ಮಳಲಿ ಮಾತನಾಡಿ, ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ ಮತ್ತು ವಿಜ್ಞಾನ ತಂತ್ರಜ್ಞಾನ ೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು, ನಾಡಿನ ಹಿರಿಮೆ&ಗರಿಮೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಕಂಕಣಬದ್ಧರಾಗಬೇಕು ಎಂದರು.
ತಾಲೂಕು ಕಸಾಪ ಅಧ್ಯ ಪಾಂಡುರಂಗ ಜಟಗನ್ನವರ ಮಾತನಾಡಿ, ಕುವೆಂಪು ಅವರ ಸಾಹಿತ್ಯ ನಾಡಿನ ವೈಚಾರಿಕ ಪ್ರಜ್ಞೆಯಾಗಿದ್ದು, ಅವರು ಬರೆದ ಕೃತಿಗಳನ್ನು ಓದಿ ಅರಿಯಬೇಕು ಎಂದರು.
ಕನ್ನಡ ಭಾಷಾ ಶಿಕ ಬಸವರಾಜ ನಾಗಮ್ಮನವರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ನಾಡಗೀತೆ ಗಾಯನ ಸ್ಪರ್ಧೆಯಲ್ಲಿ ತನುಶ್ರೀ ದ್ಯಾಮನಗೌಡ್ರ ಪ್ರಥಮ, ಶ್ರೀಜಾ ಹುಣಶ್ಯಾಳ ದ್ವೀತಿಯ, ಬಸನಗೌಡ ಪಾಟೀಲ ತೃತೀಯ ಸ್ಥಾನ ಪಡೆದಿದ್ದಾರೆ.
ಶಿಕರಾದ ಸುರೇಶ ಪೂಜೇರ, ನವೀನ ಪಟಾತ, ಶಿಕಿ ಎನ್.ವೈ.ಕೈನಕಟ್ಟಿ, ಆರ್.ಎನ್.ಬಿರಾದಾರ ಪಾಟೀಲ, ಬಿ.ಎನ್.ಹುನ್ನೂರ, ಕಾಶಿನಾಥ ಗಾಯಕವಾಡ ಇತರರಿದ್ದರು. ಮುಖ್ಯಶಿಕ್ಷಕಿ ಪಾರ್ವತಿ ಗಾಣಗಿ ಸ್ವಾಗತಿಸಿದರು. ಆರ್.ಪಿ.ಬಡಿಗೇರ ನಿರೂಪಿಸಿದರು. ಎಂ.ಬಿ.ಪಾಟೀಲ ವಂದಿಸಿದರು.