ಗೋಕಾಕ ನಗರದ ಶ್ರೀ ಲಕ್ಷಿ$್ಮದೇವಿ ಪಾದಗಟ್ಟಿ ಕಾರ್ತಿಕೋತ್ಸವದಲ್ಲಿ ಹಿರಿಯ ಕಲಾವಿದೆ ಮಾಲತಿಶ್ರೀ ಮೆಸೂರು ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರಮಿತಾ ಮುರಗೋಡ, ಜಯಾ ಕಮತ ಇತರರಿದ್ದರು.
ಗೋಕಾಕ: ಕಲೆ ಹಾಗೂ ಮನರಂಜನೆ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುತ್ತದೆ ಎಂದು ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರು ಹೇಳಿದರು.
ನಗರದ ಶ್ರೀ ಲಕ್ಷಿ$್ಮದೇವಿ ಪಾದಗಟ್ಟಿ ಕಾರ್ತಿಕೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಸಂಸತಿ ಮತ್ತು ಪರಂಪರೆ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ತಾಯಂದಿರ ಮೇಲಿದೆ. ಉಸಿರು ಹೋದರೂ ಸಮಾಜದಲ್ಲಿ ಹೆಸರು ಉಳಿಯುವಂತೆ ಬದುಕಬೇಕು. ಇಂದಿನ ಯಾಂತ್ರಿಕ ಜೀವನದಲ್ಲಿ ಸಂಬಂಧ ಗಟ್ಟಿಗೊಳಿಸುವ ಕಾರ್ಯವಾಗಬೇಕಿದೆ. ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸಿ ಕಲೆ ಬೆಳೆಸಬೇಕು ಎಂದು ತಿಳಿಸಿದರು.
ಚಿಕ್ಕಮಕ್ಕಳ ತಜ್ಞೆ ಡಾ.ಪ್ರಮಿತಾ ಮುರಗೋಡ ಮಾತನಾಡಿ, ಮೊಬೈಲ್, ಟಿವಿಗಳಿಂದ ಮಕ್ಕಳನ್ನು ದೂರವಿಡಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಕ್ರಿಯಾತ್ಮಕ ಚಟುವಟಿಕೆಗಳು ಮತ್ತು ನಿದ್ರೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ಶ್ರೀ ಲಕ್ಷಿ$್ಮದೇವಿ ಪಾದಗಟ್ಟಿ ಮಹಿಳಾ ಮಂಡಳ ಹಾಗೂ ವಚನಾಮೃತ ಮಹಿಳಾ ಮಂಡಳ ವತಿಯಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ಸಿರಿಗನ್ನಡ ಮಹಿಳಾ ವೇದಿಕೆ ಅಧ್ಯೆ ರಜನಿ ಜೀರಗ್ಯಾಳ, ಶ್ರೀ ಲಕ್ಷಿ$್ಮದೇವಿ ಪಾದಗಟ್ಟಿ ಮಹಿಳಾ ಮಂಡಳದ ಜಯಾ ಕಮತ ಇದ್ದರು.