ಮೂಡಲಗಿ ಶಿಣ ಸಂಸ್ಥೆಯಲ್ಲಿ ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್ಬಾಲ್ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ವಿ.ಆರ್.ಸೋನವಾಲ್ಕರ್, ಎಸ್.ಎಸ್.ಸನದಿ ಇತರರಿದ್ದರು.
ಮೂಡಲಗಿ: ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತಾಲೂಕು ಪ್ರೌಢಶಾಲೆ ದೈಹಿಕ ಶಿಕರ ಸಂದ ಅಧ್ಯ ಎಂ.ಎಸ್.ಮುತ್ತಣ್ಣವರ ಹೇಳಿದರು.
ತಾಲೂಕಿನ ಮೂಡಲಗಿ ಶಿಣ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ 2025&26ನೇ ಸಾಲಿನ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕ ಹಾಗೂ ಬಾಲಕಿಯರ ಹ್ಯಾಂಡ್ಬಾಲ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮೂಡಲಗಿ ಶಿಣ ಸಂಸ್ಥೆಯ ಅಧ್ಯ ವಿ.ಆರ್.ಸೋನವಾಲ್ಕರ್ ಮಾತನಾಡಿದರು.
ಚಿಕ್ಕೋಡಿ ದೈಹಿಕ ಉಪನ್ಯಾಸಕರ ಸಂದ ಖಜಾಂಚಿ ಎಸ್.ಎಸ್.ಸನದಿ, ಎಂ.ಜಿ.ಬಾಳೋಜಿ, ನಿರ್ದೇಶಕರಾದ ಎ.ವಿ.ಹೊಸಕೋಟಿ, ವಿ.ಎ.ಸೋನವಾಲ್ಕರ್, ಎಸ್.ವಿ.ಹೊಸೂರ, ಅನಿಲ ಸತರಡ್ಡಿ, ಪ್ರಾಚಾರ್ಯ ಎಂ.ಎಸ್.ಪಾಟೀಲ, ಬಿ.ಜಿ.ಗಡಾದ, ಎಸ್.ಕೆ.ಹಿರೇಮಠ, ಡಾ.ಆರ್.ಪಿ.ಬಿರಾದರ, ಎಚ್.ಡಿ.ಚಂದರಗಿ, ಎಲ್.ಆರ್.ಧರ್ಮಟ್ಟಿ, ಎಚ್.ಎಂ.ಹತ್ತರಕಿ ಇತರರಿದ್ದರು.