ಬೈಲಹೊಂಗಲದ ಶಾಸಕರ ಮತೇತ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಪಾಲಕರು, ಶಿಕರ ಸಭೆಯನ್ನು ಶಾಲಾ ವಿದ್ಯಾರ್ಥಿಗಳು ಉದ್ಘಾಟಿಸಿದರು. ಅರ್ಜುನ ಕಲಕುಟಕರ, ಕೆ.ಜಿ.ಭಜಂತ್ರಿ, ಗಂಗಮ್ಮ ಸಾಲಿ ಇತರರಿದ್ದರು. 
ರಾಜ್ಯ

ಮಕ್ಕಳ ಭವಿಷ್ಯಕ್ಕೆ ಶ್ರಮಿಸಲಿ

ಎಂ.ಎಸ್​.ಹಿರೇಮಠ ಬೆಳಗಾವಿ
ಬೈಲಹೊಂಗಲ: ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ಮುಖ್ಯವಾಗಿದ್ದು, ಅವರ ಉತ್ತಮ ಭವಿಷ್ಯಕ್ಕೆ ಪಾಲಕರು ಸದಾ ಶ್ರಮಿಸಬೇಕೆಂದು ಎಸ್​ಡಿಎಂಸಿ ಅಧ್ಯ ಅರ್ಜುನ ಕಲಕುಟಕರ ಹೇಳಿದರು.
ಪಟ್ಟಣದ ಶಾಸಕರ ಮತೇತ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರಲ್ಲಿ ಮಕ್ಕಳ ದಿನದ ಅಂಗವಾಗಿ ೇತ್ರ ಶಿಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಾಲಕ, ಶಿಕರ ಸಭೆಯಲ್ಲಿ ಮಾತನಾಡಿ, ಶಿಕರ ಜತೆಗೆ ಪಾಲಕರು ಮಕ್ಕಳ ಗುಣಮಟ್ಟದ ಶಿಣಕ್ಕೆ ಮಹತ್ವ ನೀಡಬೇಕೆಂದರು.
ಎಸ್​ಡಿಎಂಸಿ ಸದಸ್ಯ ಮಹಾಂತೇಶ ರಾಜಗೋಳಿ ಮಾತನಾಡಿದರು. ಉಪಾಧ್ಯಕ್ಷೆ ಗಂಗಮ್ಮ ಸಾಲಿ, ಸದಸ್ಯರಾದ ಗದಿಗೆಪ್ಪ ಮಡಿವಾಳರ, ನಾಗರಾಜ ಸಾಲಿಮಠ, ಪೂಜಾ ಕೊಟಬಾಗಿ, ಭಾರತಿ ಬಾದಾಮಿ, ಸೇವಂತಿ ಸೊಲಬಣ್ಣವರ, ಜ್ಯೋತಿ ಕುರಬೆಟ್ಟ, ಮಂಜುಳಾ ಬಂಡಿವಡ್ಡರ, ಯಶವಂತ ಜಗತಾಪ, ನಿಲಯ ಪಾಲಕಿ ಎಸ್​.ಎಚ್​.ಪಠಾಣ ಇತರರಿದ್ದರು. ಮುಖ್ಯಶಿಕ್ಷಕ ಕೆ.ಜಿ.ಭಜಂತ್ರಿ ಸ್ವಾಗತಿಸಿದರು. ಶಿಕರಾದ ಶ್ರೀಧರ ಇಂಗಳಗಿ ನಿರೂಪಿಸಿದರು. ಸಂದೀಪ ಕುಲಕರ್ಣಿ ವಂದಿಸಿದರು.