ಬೋರಗಾಂವನಲ್ಲಿ ಉದ್ಯಮಿ ಅಭಿನಂದನ ಪಾಟೀಲರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಪಟ್ಟಣ ಪಂಚಾಯಿತಿ ಅಧ್ಯ ಪಿಂಟು ಕಾಂಬಳೆ ಚಾಲನೆ ನೀಡಿದರು. ಅಭಯಕುಮಾರ ಮಗದುಮ್ಮ, ದಿಗಂಬರ ಕಾಂಬಳೆ, ಶೋಭಾ ಹವಲೆ, ಸುಭಾಷ ಶೆಟ್ಟಿ ಇತರರಿದ್ದರು.
ಬೋರಗಾಂವ: ಸಹಕಾರ ೇತ್ರದ ಮೂಲ ಆಶಯಗಳನ್ನು ಅರಿಹಂತ ಉದ್ಯೋಗ ಸಮೂಹದಲ್ಲಿ ಕಾಣಬಹುದಾಗಿದ್ದು, ದಿ.ರಾವಸಾಹೇಬ ಪಾಟೀಲ ಅವರು ಸಹಕಾರ ೇತ್ರ ಬಲಪಡಿಸಿ ಸಾಮಾಜಿಕ ೇತ್ರಕ್ಕೆ ಆದ್ಯತೆ ನೀಡಿದವರು ಎಂದು ಪಪಂ ಸದಸ್ಯ ಅಭಯಕುಮಾರ ಮಗದುಮ್ಮ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬುಧವಾರ ಉದ್ಯಮಿ ಅಭಿನಂದನ ಪಾಟೀಲ ಅವರ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣು ವಿತರಣೆ, ಅರಿಹಂತ ಸ್ಪಿನ್ನಿಂಗ್ ಮಿಲ್ನಲ್ಲಿ ರಕ್ತದಾನ ಶಿಬಿರ, ಅಂಗವಿಕಲ ಮಕ್ಕಳಿಗೆ ಶೈಣಿಕ ಸಾಮಗ್ರಿ ಮತ್ತು ಆಹಾರ ವಿತರಣೆ, ವೃದ್ಧಾಶ್ರಮಗಳಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ದಿ.ರಾವಸಾಹೇಬ ಪಾಟೀಲರ ಆದರ್ಶದಡಿ ಅರಿಹಂತ ಸಂಸ್ಥೆಯ ಅಧ್ಯ ಅಭಿನಂದನ ಪಾಟೀಲ ಮತ್ತು ಯುವ ನಾಯಕ ಉತ್ತಮ ಪಾಟೀಲ ಸಾಮಾಜಿಕ ವಲಯವನ್ನು ಇನ್ನಷ್ಟು ಬಲಪಡಿಸುತ್ತಿದ್ದಾರೆ. ಅವರ ಕಾರ್ಯಗಳು ಎಲ್ಲರಿಗೂ ಮಾದರಿ ಎಂದರು. ಪಟ್ಟಣ ಪಂಚಾಯಿತಿ ಸದಸ್ಯ ಶೋಭಾ ಹಾವಲೆ ಮಾತನಾಡಿ, ಅಭಿನಂದನ ಪಾಟೀಲ ಅವರು ಸಹಕಾರ ೇತ್ರದ ಜತೆಗೆ ಸಾಮಾಜಿಕ ವಲಯಕ್ಕೂ ಪ್ರಾಮುಖ್ಯತೆ ನೀಡಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ದಿಗಂಬರ ಕಾಂಬಳೆ ಮಾತನಾಡಿ, ಅಭಿನಂದನ ಪಾಟೀಲ ಅನೇಕರಿಗೆ ಉದ್ಯೋಗಾವಕಾಶ, ಶಾಲಾ&ಕಾಲೇಜು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಣ ನೀಡಿ ಸಹಾಯ ಮಾಡಿದ್ದಾರೆ ಎಂದರು. 50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಪಪಂ ಅಧ್ಯ ಪಿಂಟು ಕಾಂಬಳೆ, ಸದಸ್ಯ ದಿಗಂಬರ ಕಾಂಬಳೆ, ಸ್ಥಾಯಿ ಸಮಿತಿ ಅಧ್ಯ ಪ್ರದಿಪ ಮಾಳಿ, ತುಳಸಿದಾಸ ವಸವಾಡೆ, ಜಾವೇದ್ ಮಕಾನದಾರ, ಬಾಬಾಸಾಹೇಬ ವಾಸವಾಡೆ, ಅಮರ ಶಿಂಗೆ, ಅರಿಹಂತ ಸಂಸ್ಥೆಯ ನಿರ್ದೇಶಕ ಸುಭಾಷ ಶೆಟ್ಟಿ, ಸಿಇಒ ಅಶೋಕ ಬಂಕಾಪುರೆ, ಅಭಯಕುಮಾರ ಕರೋಲೆ, ರಾಜು ಮಗದುಮ್ಮ, ಪೀರಗೌಡ ಪಾಟೀಲ, ಜಂಬು ಮಳವಾಡೆ, ಶಿವಾನಂದ ರಾಜಮಾನೆ, ಅಣ್ಣಾಸಾಹೇಬ ಭೋಜಕರ, ಅಶೋಕ ವಠಾರೆ, ಕೃಷಿ ಸಂದ ಸಿಇಒ ಆರ್.ಟಿ.ಚೌಗುಲಾ, ಅಶೋಕ ನೇಜೆ, ರಾಜು ಐದಮಾಳೆ, ಸಂಗಪ್ಪ ಐದಮಾಳೆ, ಬಾಹುಬಲಿ ಕವಟೆ, ಸಂಜಯ ಪವಾರ, ಭೂಷಣ ಕಾಂಬಳೆ, ಅರಿಹಂತ ಸ್ಪಿನ್ನಿಂಗ್ ಮಿಲ್ನ ಎಂಡಿ ಯುವರಾಜ ಜ್ಯೋತಿ, ರಾಜೇಶ ಕರ್ವೇಕರ, ಸಂದೀಪ ಕುಲಕರ್ಣಿ, ರೋಹಿತ ಪಾಟೀಲ ಇತರರಿದ್ದರು.