ಸವದತ್ತಿ ಗ್ರಾಮದೇವಿ ಜಾತ್ರೋತ್ಸವ ನಿಮಿತ್ತ ಶಾಸಕ ವಿಶ್ವಾಸ ವೈದ್ಯ ಗ್ರಾಮದೇವಿ ಗುಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸಿದರು. ಸಂಗನಬಸಯ್ಯ ಗದಗಿಮಠ, ಧರ್ಮಾಕರ ಧರ್ಮಟ್ಟಿ ಇತರರಿದ್ದರು.
ಸವದತ್ತಿ: ನಲವತ್ತು ವರ್ಷಗಳ ಬಳಿಕ ನಡೆಯಲಿರುವ ಗ್ರಾಮದೇವಿ ಜಾತ್ರೆ ಯಶಸ್ಸಿಗಾಗಿ ಅಗತ್ಯ ಸಿದ್ಧತೆ ಕೈಗೊಂಡು ಶ್ರೀ ಕಾಮಗಾರಿ ಪ್ರಾರಂಭಿಸಿ ಎಂದು ಶಾಸಕ ವಿಶ್ವಾಸ ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೋತ್ಸವ ನಿಮಿತ್ತ ಬುಧವಾರ ಗ್ರಾಮದೇವಿ ಗುಡಿ ಹಾಗೂ ಸುತ್ತಮುತ್ತಲಿನ ಸ್ಥಳ ಪರಿಶೀಲಿಸಿ ಮಾತನಾಡಿ, ಗ್ರಾಮದೇವಿ ದೇವಸ್ಥಾನದ ನವೀಕರಣ ಸೇರಿ ಜಾತ್ರೆ ಸಿದ್ಧತೆ ಅಗತ್ಯ ಕಾಮಗಾರಿ ಆರಂಭಿಸಬೇಕು ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಗ್ರಾಮದೇವಿ ಜಾತ್ರೆ ಅದ್ದೂರಿಯಾಗಿ ನೆರವೇರಿಸಲು ಎಲ್ಲರ ಸಹಕಾರ ಅತ್ಯಗತ್ಯ. ಜವಾಬ್ದಾರಿಯಿಂದ ಪೂರ್ವ ಸಿದ್ಧತೆ ಕೈಗೊಂಡು ಜಾತ್ರೆ ಯಶಸ್ವಿಗೊಳಿಸೋಣ ಎಂದರು. ಲೋಕೋಪಯೋಗಿ ಇಲಾಖೆಯ 1.5 ಕೋಟಿ ರೂ. ಅನುದಾನದಲ್ಲಿ ಸ್ಥಳಿಯ ಚರಂಡಿ, ರಸ್ತೆ ಅಭಿವೃದ್ಧಿಪಡಿಸುವ ಕುರಿತಾಗಿ ಅಧಿಕಾರಿಗಳೊಂದಿಗೆ ಶಾಸಕರು ಸ್ಥಳ ಪರಿಶೀಲನೆ ನಡೆಸಿದರು.
ಪುರಸಭೆ ಮುಖ್ಯಧಿಕಾರಿ ಸಂಗನಬಸಯ್ಯ ಗದಗಿಮಠ, ಸಿಪಿಐ ಧರ್ಮಾಕರ ಧರ್ಮಟ್ಟಿ, ಹೆಸ್ಕಾಂ ಎಇಇ ವಿಶಾಪೂರಕರ, ಎ.ಎಂ.ಮಕಾನದಾರ, ಸುಭಾಸ ರಜಪೂತ,
ಮಲ್ಲಿಕಾರ್ಜುನ ಬೇವೂರ, ಅಲ್ಲಮಪ್ರಭು ಪ್ರಭುನವರ, ಶಿವಾನಂದ ಹೂಗಾರ, ಬಸವರಾಜ ಅರಮನಿ ಇತರರಿದ್ದರು.