ಎಂ.ಕೆ.ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಂಟಿನ್ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಪ್ರಕಾಶ ಕೊಡ್ಲಿ, ಮಂಜುನಾಥ ಕಡಕೋಳ, ಮಲ್ಲಿಕಾರ್ಜುನ ಕಲಾದಗಿ, ರವಿಶಂಕರ ಮಾಸ್ತಿಹೊಳಿಮಠ ಇತರರಿದ್ದರು.
ಎಂ.ಕೆ.ಹುಬ್ಬಳ್ಳಿ: ಅನ್ನಭಾಗ್ಯ ಯೋಜನೆ ಮೂಲಕ ಬಡಜನರ ಹಸಿವು ನೀಗಿಸುವ ಜತೆಗೆ ಇಂದಿರಾ ಕ್ಯಾಂಟಿನ್ ತೆರೆದು ಅತಿ ಕಡಿಮೆ ದರದಲ್ಲಿ ಉಪಹಾರ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಯೋಜನೆ ಜನಪರ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ&4ರ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಂಟಿನ್ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಬಳಿಕ ಪಟ್ಟಣದ ಗಾಂಧಿ- ನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಹಾಗೂ ಕಲ್ಮೇಶ್ವರ ದೇವಸ್ಥಾನ ಬಳಿ ನಮ್ಮ ಕ್ಲಿನಿಕ್ ಉದ್ಘಾಟಿಸಿದರು.
ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಗ್ರಾಮ ಆಡಳಿತಾಧಿಕಾರಿ ಬಸವರಾಜ ಕೊಂಡಿಕೊಪ್ಪ, ರಾಣಿ ಶುಗರ್ಸ್ ಮಾಜಿ ನಿರ್ದೇಶಕ
ಎನ್.ಸಿ.ಗಣಾಚಾರಿ, ಶ್ರೀಶೈಲ ಗಣಾಚಾರಿ, ಕೀರಪ್ಪ ಸಕ್ರೆನ್ನವರ, ಶಂಕರ ಕಿಲ್ಲೇದಾರ, ಪಪಂ ಅಧ್ಯ ಪ್ರಕಾಶ ಕೊಡ್ಲಿ, ಉಪಾಧ್ಯ ಮಂಜುನಾಥ ಕಡಕೋಳ, ದೇಮಪ್ಪ ಬಸರಗಿ, ಗದಿಗೆವ್ವ ಜಂಗಳಿ, ದೊಡ್ಡಪ್ಪ ಗಣಾಚಾರಿ, ಪ್ರಕಾಶ ಗಿರಜಿಮನಿ, ಲಕ್ಷಿ$್ಮ ನಾಗನೂರ, ಸುರೇಶ ಮುತ್ನಾಳ, ಸಾವಿತ್ರಿ ಹೊನ್ನಣ್ಣವರ, ಸುಶೀಲಾ ಗಣಾಚಾರಿ, ಸುಭಾನಿ ಅಗಸಿಬಾಗಿಲ, ಪರವಿನ್ ನಬುವಾಲೆ, ಸಮೀರ ಪಟೇಲ, ಮಂಗಳಾ ದೇಮಟ್ಟಿ ಇತರರಿದ್ದರು. ಮೃತ್ಯುಂಜಯ ಕಲ್ಮಠ ನಿರೂಪಿಸಿದರು.