ಶಿವಮೊಗ್ಗ: ಚಾಣಕ್ಯ ಚೆಸ್ ಸ್ಕೂಲ್, ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯಿಂದ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಜೂ. 27ರಿಂದ 29ರವರೆಗೆ 19 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಫಿಡೆ ಕ್ಲಾಸಿಕಲ್ ರೇಟಿಂಗ್ ಚೆಸ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಚಾಣಕ್ಯ ಚೆಸ್ ಸ್ಕೂಲ್ ಸಂಸ್ಥಾಪಕ ವಿಲ್ಸನ್ ಅಂದ್ರಾದೆ ತಿಳಿಸಿದರು.
ಬಾಲಕ ಮತ್ತು ಬಾಲಕಿಯರ ಪ್ರತ್ಯೇಕ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. 72 ಸಾವಿರ ರೂ. ನಗದು ಬಹುಮಾನ ಹಾಗೂ 120 ಟ್ರೋಫಿಗಳನ್ನು ನೀಡಲಾಗುವುದು. ವಿಜೇತರಾದ ಮೊದಲ ನಾಲ್ವರು ಬಾಲಕ-ಬಾಲಕಿಯರನ್ನು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ನೋಂದಣಿಗೆ ಜೂ.26ರ ಸಂಜೆ 4ರವರೆಗೆ ಅವಕಾಶವಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಎಐಸಿಎಫ್ ಹಾಗೂ ಕೆಎಸ್‌ಸಿಎನಲ್ಲಿ ನೋಂದಣಿ ಮಾಡಿಸಿರಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
27ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿನೋಬನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಕೆ.ಸಂತೋಷ್‌ಕುಮಾರ್, ಜೆಸಿಐ ವಲಯ 24ರ ಅಧ್ಯಕ್ಷ ಸಿ.ಎ.ಗೌರೀಶ್ ಭಾರ್ಗವ್ ಮತ್ತಿತರರಿದ್ದರು.
ಜೆಸಿಐ ವಲಯ-24ರ ಉಪಾಧ್ಯಕ್ಷ ಪ್ರಮೋದ್ ಶಾಸ್ತ್ರಿ, ಚಿರಂತನ ಅಧ್ಯಕ್ಷ ರುದ್ರೇಶ್ ಕೋರಿ, ಪ್ರಮುಖರಾದ ವೈಷ್ಣವಿ ಚಂದನ್, ಪಿ.ಎಸ್.ಸಚ್ಚಿನ್, ಪ್ರಾಣೇಶ್ ಯಾದವ್ ಸುದ್ದಿಗೋಷ್ಠಿಯಲ್ಲಿದ್ದರು.