ರಾಣೆಬೆನ್ನೂರ: ಜಿಲ್ಲಾ ಚೆಸ್ ಅಸೋಸಿಯೇಷನ್ ಹಾಗೂ ಖನ್ನೂರ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ವತಿಯಿಂದ ಏ. 25ರಿಂದ 27ರವರೆಗೆ ನಗರದ ಶ್ರೀನಿವಾಸ ಕಾಕಿಯವರ ಜೇಸಿವಾಣಿ ಅರಮನೆಯಲ್ಲಿ ರಾಜ್ಯಮಟ್ಟದ ಅಂಡರ್&9 ಓಪನ್ ಮತ್ತು ಅಂಡರ್&-9 ಬಾಲಕಿಯರ ಚೆಸ್ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ.
ರಾಜ್ಯಾದ್ಯಂತದ 160ಕ್ಕೂ ಅಧಿಕ ಚೆಸ್ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಜೇತರು ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆಯುವ ಅವಕಾಶವಿದೆ ಎಂದು ಖನ್ನೂರ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಪ್ರವಿಣ ಖನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.