ನ್ಯೂಸ್

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; 20 ಸರ್ಕಾರಿ ಪ್ರಾಥಮಿಕ, 11 ಪ್ರೌಢಶಾಲಾ, 8 ಪಿಯು, ಇಬ್ಬರು ಪ್ರಾಂಶುಪಾಲರಿಗೆ ಗೌರವ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಶಾಲೆಯ 20 ಮತ್ತು ಪ್ರೌಢಶಾಲೆಯ 11 ಶಿಕ್ಷಕರು, ಪದವಿಪೂರ್ವ 8 ಉಪನ್ಯಾಸಕರು ಹಾಗೂ ಇಬ್ಬರು ಪ್ರಾಂಶುಪಾಲರು ಸೇರಿ 2024-25ನೇ ಸಾಲಿಗೆ ಒಟ್ಟು 41 ಶಿಕ್ಷಕರಿಗೆ ‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಘೋಷಿಸಿದೆ.

ಮಹಿಳಾ ಶಿಕ್ಷಕಿಯರಿಗೆ ‘ಮಾತೆ ಸಾವಿತ್ರಿ ಬಾಯಿ ಪುಲೆ’ ಹೆಸರಿನಲ್ಲಿ ಸೆ.5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಯು 25 ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ಇದಕ್ಕಾಗಿ 7.75 ಲಕ್ಷ ರೂ.ಗಳನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ ಭರಿಸಲು ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರು

ಪದ್ಮಶ್ರೀ ಸುರೇಶ ರೂಗೆ: ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಉಳಾಗಡ್ಡಿವಾಡಿ, ಚಿಕ್ಕೋಡಿ

ಮಲ್ಲಿಕಾರ್ಜುನ ಎಸ್. ಸಿರಸಿಗಿ: ಸಹಿಪ್ರಾ ಶಾಲೆ, ಭೂಸಣಗಿ, ಕಲಬುರಗಿ ಉತ್ತರ

ಅರುಣಕುಮಾರ್ ಬಿ.: ಸಕಿಪ್ರಾ ಶಾಲೆ, ಹಿಂಡಸಘಟ್ಟ ಕ್ಯಾಂಪ್, ಹರಿಹರ, ದಾವಣಗೆರೆ,

ಮಧುಸೂದನ್ ಕೆ.ಎಸ್.: ಸಹಿಪ್ರಾ ಶಾಲೆ, ಹಿನಕಲ್, ಮೈಸೂರು ಗ್ರಾಮಾಂತರ.

ಆಸ್ಮಾ ಇಸ್ಮಾಯಿಲ್ ನದಾ: ಮರಾಠಿ ಸಹಿಪ್ರಾ ಶಾಲೆ, ಅಂಬೇವಾಡಿ, ಬೆಳಗಾವಿ ಗ್ರಾಮಾಂತರ,

ಯಮುನಾ ಕೆ: ದಕ್ಷಿಣ ಕನ್ನಡ ಜಿಪಂ ಸಹಿಪ್ರಾ ಶಾಲೆ, ನೀರ್ಕರೆ, ಮೂಡಬಿದ್ರೆ, ದಕ್ಷಿಣ ಕನ್ನಡ

ಜಮೀರ್ ಅಬ್ದುಲ್ ಗಾರಸಾಬ ರಿತ್ತಿ: ಸಹಿಪ್ರಾ ಶಾಲೆ, ಅತ್ತಿಕಟ್ಟೆ, ಬ್ಯಾಡಗಿ ತಾ., ಹಾವೇರಿ

ರಂಗನಾಥ ಜಿ.: ಸಹಿಪ್ರಾ ಶಾಲೆ, ಛತ್ರಖಾನೆ (ಚಂದಾುರ), ಆನೇಕಲ್ ತಾ. ಬೆಂಗಳೂರು ದಕ್ಷಿಣ

ಸುಶೀಲಮ್ಮ: ಸಹಿಪ್ರಾ ಶಾಲೆ, ಇನಮಿಂಚೇನಹಳ್ಳಿ, ಚಿಕ್ಕಬಳ್ಳಾಪುರ

ರಮೇಶ್ ಎಸ್.ವಿ.: ಸಹಿಪ್ರಾ ಶಾಲೆ, ಬಸವನಹಳ್ಳಿ, ಮಧುಗಿರಿ ತಾ. ಮಧುಗಿರಿ

ಹನುಮಪ್ಪ ಎಂ ಕುಂದರಗಿ, ಮುಖ್ಯ ಶಿಕ್ಷಕ.: ಸಹಿಪ್ರಾ ಶಾಲೆ, ಇಂಡಿಪಂಪ, ಹಳೇಹುಬ್ಬಳ್ಳಿ, ಎಚ್‌ಡಿಎಂಸಿ ಹುಬ್ಬಳ್ಳಿ, ಧಾರವಾಡ ಜಿಲ್ಲೆ

ಪರಮೇಶ್ವರಪ್ಪ, ಆರ್.ಟಿ.: ಸಕಿಪ್ರಾ ಶಾಲೆ, ಹೊಸಹಟ್ಟಿ, ಮ್ಯಾಕ್ಲೂರಹಳ್ಳಿ, ಹಿರಿಯೂರು ತಾ., ಚಿತ್ರದುರ್ಗ,

ರಾಮಚಂದ್ರ ಶೇಷಾಜಪ್ಪ ಕಲಾಲ : ಸಹಿಪ್ರಾ ಶಾಲೆ, ಜೋಗೇಶ್ವರ ಹಳ್ಳ, ಮುಂಡಗೋಡ ತಾ., ಶಿರಸಿ

ಭಾಗೀರಥಿ ಎಂ.: ಸಕಿಪ್ರಾ ಶಾಲೆ, ಗುತ್ಯಪ್ಪ, ಕಾಲೋನಿ, ಶಿವಮೊಗ್ಗ

ಮಧುನಾಯ್ಕ ಎಲ್.: ಉನ್ನತೀಕರಿಸಿದ ಸಹಿಪ್ರಾ ಶಾಲೆ, ಹಿರೇಕೊಳಚಿ, ಹಡಗಲಿ ತಾ., ವಿಜಯನಗರ

ಸುರೇಶ ಪಿ.: ಕೆಪಿಎಸ್ ಉನ್ನತೀಕರಿಸಿ ಸಹಿಪ್ರಾ ಶಾಲೆ, ವಿದ್ಯಾಸಂದ್ರ, ಅರಳಾಳುಸಂದ್ರ ಚನ್ನಪಟ್ಟಣ ತಾ. ರಾಮನಗರ

ನೀಲಪ್ಪ ಎಸ್. ತೆಗ್ಗಿ : ಸಹಿಪ್ರಾ ಶಾಲೆ, ಬಸ್ಸಾಪುರ, ಆರ್.ಕೆ.ಎನ್. ನಗರ, ಸುರಪುರ ತಾ., ಯಾದಗಿರಿ

ರಾಘವೇಂದ್ರ ಎಸ್. ಮಡಿವಾಳ : ಸಹಿಪ್ರಾ ಶಾಲೆ, ಹೊನ್ನೆಮಡಿ, ಬೆಳಕೆ, ಭಟ್ಕಳ ತಾ., ಉತ್ತರ ಕನ್ನಡ

ಮಂಗಳಕುಮಾರಿ ಎಂ.ಎಚ್.: ಸಹಿಪ್ರಾ ಶಾಲೆ, ಬೀಡಿಕೆರೆ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಂ.

ರತ್ನಾಬಾಯಿ ಗಿರೋಸಬದಿ: ಸಹಿಪ್ರಾ ಶಾಲೆ, ಬಸಾಪೂರ, ಗದಗ ಗ್ರಾಂಮಾತರ, ಗದಗ

ಪ್ರೌಢಶಾಲಾ ಶಿಕ್ಷಕರು

ರವೀಂದ್ರ ಆರ್.ಡಿ., ಕನ್ನಡ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಲೋಕನಾಥಪುರ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು

ರವಿಕುಮಾರ್ ಟಿ.ಕೆ. ಮುಖ್ಯ ಶಿಕ್ಷಕ- ಲಕ್ಷ್ಮೀನರಸಿಂಹಸ್ವಾಮಿ ಪ್ರೌಢಶಾಲೆ, ಟಿ. ಬೇಗೂರು, ನೆಲಮಂಗಲ ತಾ., ಬೆಂಗಳೂರು ಗ್ರಾಂ.

ಮಹಾದೇವ ಬೊಮ್ಮುಗೌಡ, ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಹಿರೇಗುತ್ತಿ, ಕುಮಟಾ ತಾ., ಉತ್ತರ ಕನ್ನಡ

ವೀರೇಶ ಟಿ.- ಸಮಾಜ ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಹೊಸೂರು, ಗುಡ್ಡೇಕೇರಿ, ತೀರ್ಥಹಳ್ಳಿ ತಾ. ಶಿವಮೊಗ್ಗ

ಕಳಕಮಲ್ಲೇಶ ಪಟ್ಟಣಶೆಟ್ಟಿ, ವಿಜ್ಞಾನ ಶಿಕ್ಷಕ- ಮೃತ್ಯುಂಜಯ ಪ್ರೌಢಶಾಲೆ, ಇಂಗಳಹಳ್ಳಿ, ಹುಬ್ಬಳ್ಳಿ ತಾ., ಧಾರವಾಡ

ಶಾಮಲ ಎಸ್., ವಿಜ್ಞಾನ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ,(ಆರ್‌ಎಂಎಸ್‌ಎ), ಗೃಹಲಕ್ಷ್ಮೀ ಬಡಾವಣೆ, ನೆಲಗದರನಹಳ್ಳಿ, ಬೆಂಗಳೂರು ಉತ್ತರ

ವಿನಾಯಕ ನಾಯ್ಕ, ಸಮಾಜ ವಿಜ್ಞಾನ ಶಿಕ್ಷಕ- ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ರೆಂಜಾಳಮ ಕಾರ್ಕಳ ತಾ. ಉಡುಪಿ

ಪದ್ಮಾವತಿ ಸಿ. ಮುಖ್ಯ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ, ಕೋನೇನ ಅಗ್ರಹಾರ, ಬೆಂಗಳೂರು ದಕ್ಷಿಣ

ಶಶಿಕಲಾ ಲಕ್ಷ್ಮಣ ಬಡಿಗೇರ, ವಿಜ್ಞಾನ ಶಿಕ್ಷಕಿ- ಸರ್ಕಾರಿ ಪ್ರೌಢಶಾಲೆ,ನಾದ ಕೆ.ಡಿ., ಇಂಡಿ ತಾ., ವಿಜಯಪುರ

ಹರೀಶ್ ರಾಜ ಅರಸ್, ವಿಜ್ಞಾನ ಶಿಕ್ಷಕ- ಸರ್ಕಾರಿ ಪ್ರೌಢಶಾಲೆ, ಹಂಪಸಂದ್ರ, ಗುಡಿಬಂಡೆ ತಾ. ಚಿಕ್ಕಬಳ್ಳಾಪುರ

ವಿಶ್ವನಾಥ ಗೌಡ ಕೆ. ಚಿತ್ರಕಲಾ ಶಿಕ್ಷಕ (ವಿಶೇಷ ಶಿಕ್ಷಕ)- ದಕ್ಷಿಣ ಕನ್ನಡ ಜಿಪಂ., ಸರ್ಕಾರಿ ಪ್ರೌಢಶಾಲೆ, ಗುರುವಾಯನಕೆರೆ, ಬೆಳ್ತಂಗಡಿ, ತಾ. ದಕ್ಷಿಣ ಕನ್ನಡ

ಪ್ರಾಂಶುಪಾಲರು

ರಾಮೇಗೌಡ ಎ., ಪ್ರಾಂಶುಪಾಲರು- ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹುಣಸೂರು, ಮೈಸೂರು ಜಿಲ್ಲೆ

ರಾಧಾಕೃಷ್ಣ ಬಿ.ಜಿ.- ಸರ್ಕಾರಿ ಪಿಯು ಕಾಲೇಜು, ಕುಂದಾಪುರ, ಉಡುಪಿ

ಉಪನ್ಯಾಸಕರು

ವಾಸುದೇವ ಕೆ.ಎಂ., ಗಣಿತ ಉಪನ್ಯಾಸಕ, ಸರ್ಕಾರಿ ಪಿಯು ಕಾಲೇಜು, ರಿಪ್ಪನ್‌ಪೇಟೆ, ಶಿವಮೊಗ್ಗ

ನಾಗವೀಣಾ, ಜೀವಶಾಸ ಉಪನ್ಯಾಸಕಿ- ಸರ್ಕಾರಿ ಎಸ್‌ಎಸ್‌ವಿಎನ್‌ಎಂ ಬಾಲಕಿಯರ ಪಿಯು ಕಾಲೇಜು, ಮಲ್ಲೇಶ್ವರ ಬೆಂಗಳೂರು

ಗಂಗಾಧರ ಬೆಟಗೇರಿ,ಇಂಗ್ಲಿಷ್ ಉಪನ್ಯಾಸಕ- ಸರ್ಕಾರಿ ಚಿಂತಾಮಣಿರಾಬ್ ಪಿಯು ಕಾಲೇಜು, ಶಹಪೂರ,ಬೆಳಗಾವಿ

ಸಾವಲ್‌ಸಂಗ್ ಎಸ್.ಬಿ., ಕನ್ನಡ ಉಪನ್ಯಾಸಕ- ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ವಿಜಯಪುರ

ವಸಂತ ಕೆ. ನಾಯಕ, ಇತಿಹಾಸ ಉಪನ್ಯಾಸಕ- ವೆಂಕಟರಾವ್ ನೀಲೆಕಣಿ ಸರ್ಕಾರಿ ಪಿಯು ಕಾಲೇಜು, ಶಿರಸಿ, ಉತ್ತರ ಕನ್ನಡ

ಸೈದುಸಾಬ್ ಎನ್. ಪಡಸಲಗಿ, ರಾಜ್ಯಶಾಸ ಉಪನ್ಯಾಸಕ- ಸರ್ಕಾರಿ ಪಿಯು ಕಾಲೇಜು, ಮುಧೋಳ, ಬಾಗಲಕೋಟೆ

ಅಣ್ಣಪ್ಪ ಸದಾಶಿವ ಕುಂಬಾರ, ಅರ್ಥಶಾಸ ಉಪನ್ಯಾಸಕ- ನ್ಯೂ ಸಂಯುಕ್ತ ಪಿಯು ಕಾಲೇಜು, ರಾಯಭಾಗ, ಚಿಕ್ಕೋಡಿ

ಗೌರಮ್ಮ ಹನುಮಂತಪ್ಪ ಕಡೇಮನಿ, ಸಮಾಜಶಾಸ ಉಪನ್ಯಾಸಕಿ- ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬಸವನಗುಡಿ, ಬೆಂಗಳೂರು