ಬಸವನಗುಡಿ ಈಜು ಕೇಂದ್ರಕ್ಕೆ ಸಮಗ್ರ ಪ್ರಶಸ್ತಿ
ಬೆಂಗಳೂರು: ಆತಿಥೇಯ ಬಸವನಗುಡಿ ಈಜು ಕೇಂದ್ರ ತಂಡ (ಬಿಎಸಿ) ರಾಜ್ಯ ಜೂನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ (state junior swimming championship 2026) ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಬಿಎಸಿ ತಂಡ ಒಟ್ಟು 1,600 ಅಂಕ ಕಲೆಹಾಕುವ ಮೂಲಕ ಈ ಸಾಧನೆ ಮಾಡಿತು. ನೆಟ್ಟಕಲ್ಲಪ್ಪ ಈಜು ಕೇಂದ್ರದ ತಂಡ 286 ಅಂಕಗಳೊಂದಿಗೆ ರನ್ನರ್ಅಪ್ ಸ್ಥಾನ ಗಳಿಸಿತು.
ಬಸವನಗುಡಿ ಈಜು ಕೇಂದ್ರದಲ್ಲಿ ಗುರುವಾರ ಮುಕ್ತಾಯಗೊಂಡ ಕೂಟದಲ್ಲಿ ಡಾಲ್ಫಿನ್ನ ಸೋಹಮ್ ಮೊಂಡಲ್ (ಗ್ರೂಪ್ ಎ1 ಬಾಲಕರು), ಮಹಿಕಾ ದತ್ತ (ಗ್ರೂಪ್ ಬಿ1 ಬಾಲಕಿಯರು), ಮತ್ಸ$ದ ಸುಬ್ರಹ್ಮಣ್ಯ ಜೀವಾಂಶ್ (ಗ್ರೂಪ್ ಬಿ2 ಬಾಲಕರು), ಗ್ಲೋಬಲ್ನ ಸಬಾ ಸುಹಾನಾ (ಗ್ರೂಪ್ ಎ1 ಬಾಲಕಿಯರು), ಲಕ್ಷ$್ಯನ್ನ ತ್ರಿಷಾ ಸಿಂಧು (ಗ್ರೂಪ್ ಬಿ2 ಬಾಲಕಿಯರು) ವೈಯಕ್ತಿಕ ಪ್ರಶಸ್ತಿ ಪಡೆದರು.
ಬಿಎಸಿಯ ಡೇನಿಯಲ್ ಪೌಲ್ ಜೆ (ಗ್ರೂಪ್ ಎ2 ಬಾಲಕರು), ಯಶ್ ಎಚ್. ಪಾಲ್ (ಗ್ರೂಪ್ ಬಿ1 ಬಾಲಕರು), ಸಮನ್ವಿ ಇ.ಎಸ್. (ಗ್ರೂಪ್ ಎ1 ಬಾಲಕಿಯರು), ಮೀನಾ ಮೆನನ್ (ಗ್ರೂಪ್ ಎ2 ಬಾಲಕಿಯರು), ಪ್ರಿಯಾಂಶಿ ಮಿಶ್ರಾ (ಗ್ರೂಪ್ ಎ2 ಬಾಲಕಿಯರು) ಕೂಡ ವೈಯಕ್ತಿಕ ಪ್ರಶಸ್ತಿ ಗಳಿಸಿದರು. ಕೂಟದ ಕೊನೆಯ ದಿನವೂ ಬಿಎಸಿ ಈಜುಪಟುಗಳು ಹೆಚ್ಚಿನ ಪದಕಗಳನ್ನು ಗೆದ್ದು ಪ್ರಾಬಲ್ಯ ಕಾಯ್ದುಕೊಂಡರು.