ನ್ಯೂಸ್

ರಾಜ್ಯ ಶಿಕ್ಷಣ ನೀತಿ: ಸಾರ್ವಜನಿಕರಿಂದ ಸಲಹೆ ಆಹ್ವಾನ

ಬೆಂಗಳೂರು ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಆಯೋಗವು ಸಾರ್ವಜನಿಕರು, ಶಿಕ್ಷಣ ಪಾಲುದಾರರಿಂದ ಎಸ್‌ಇಪಿ ಕುರಿತು ಸಲಹೆ/ ಶಿಾರಸುಗಳನ್ನು ಆಹ್ವಾನಿಸಿದೆ.

ಎಸ್‌ಇಪಿ ಆಯೋಗವು 2023 ನವೆಂಬರ್‌ನಿಂದ ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು, ಶಿಕ್ಷಣ ಪಾಲುದಾರರು ತಮ್ಮ ಸಲಹೆ ಮತ್ತು ಸೂಚನೆಗಳನ್ನು ರಾಜ್ಯ ಶಿಕ್ಷಣ ನೀತಿ ಆಯೋಗ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ನಂ.30, 3ನೇ ಮಹಡಿ, ಪ್ರಸನ್ನ ಕುಮಾರ ಬ್ಲಾಕ್, ವೈಘಿ.ರಾಮಚಂದ್ರ ರಸ್ತೆ, ಗಾಂಧಿನಗರ, ಬೆಂಗಳೂರು 56009 ಈ ವಿಳಾಸಕ್ಕೆ ಕಳುಹಿಸುವಂತೆ ಕೋರಿದೆ.

ಅಲ್ಲದೆ,sepck.karnataka.gov.in sepc.stakeholders@gmail.com ವಿಳಾಸಕ್ಕೆ ಇ-ಮೇಲ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ 080-22341936 ಸಂಪರ್ಕಿಸಬಹುದು.