ಬೆಂಗಳೂರು: ವರ್ಷದ ಮೊದಲ ಅಧಿವೇಶನ ಸೋಮವಾರದಿಂದ (ಫೆ.17) ಆರಂಭವಾಗುತ್ತಿದ್ದು, ಮೂರು ರಾಜಕೀಯ ಪಕ್ಷಗಳ ಮೇಲಾಟಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಸರ್ಕಾರದ ಮೇಲೆ ಸವಾರಿ ಮಾಡಲು ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನಿಟ್ಟುಕೊಂಡಿರುವ ಕಾಂಗ್ರೆಸ್, ಅಧಿವೇಶನದ ಪೂರ್ವಾರ್ಧದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ನಿರ್ಧರಿಸಿದೆ. ಇನ್ನು ಮೈತ್ರಿ ಸರ್ಕಾರ ಕೆಡವಿದ ಬಿಜೆಪಿ ವಿರುದ್ಧ ಎಗರಿ ಬೀಳಲು ಜೆಡಿಎಸ್ ಕೂಡ ಸಿದ್ಧವಾಗಿದೆ. ಇತ್ತ ಬಿಜೆಪಿಗರೂ ಕೂಡ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸಜ್ಜಾಗಿದ್ದು, ‘ಅರ್ಹ’ರು ಪಕ್ಷಕ್ಕೆ ಮತ್ತಷ್ಟು ಬಲ ತಂದಿದೆ.