ನ್ಯೂಸ್

ರಾಜ್ಯ ಬಜೆಟ್​ 2023: ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಜನತೆಯ ಹೆಸರಿನಲ್ಲಿ ಅರ್ಚನೆ

ಬೆಂಗಳೂರು: ಇಂದು ಬಜೆಟ್ ಮಂಡನೆ​ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ದೇವರ ದರ್ಶನ ಪಡೆದರು.

ಸಮಸ್ತ ಕರ್ನಾಟಕದ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಸಿಎಂ ಬೊಮ್ಮಾಯಿ, ಮಂಗಳ ಆರತಿ ತಟ್ಟೆಗೆ 500 ರೂಪಾಯಿಯ ಎರಡು ನೋಟುಗಳನ್ನು ಹಾಕಿದರು. ಈ ವೇಳೆ ಸಚಿವ ಬೈರತಿ ಬಸವರಾಜ ಉಪಸ್ಥಿತರಿದ್ದರು.

ಶ್ರೀ ಕಂಠೇಶ್ವರ ದೇವಸ್ಥಾನ ಬಳಿಕ ಭಗವಾನ್ ಶ್ರೀ ಮಾರುತಿ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದರು.

ಇಂದಿನ ಬಜೆಟ್​ ಪ್ರಸಕ್ತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್​ ಆಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಬೊಮ್ಮಾಯಿ ಅವರು ಇಂದು ಬೆಳಗ್ಗೆ 10.15ಕ್ಕೆ 2ನೇ ಬಾರಿಗೆ ಬಜೆಟ್​ ಮಂಡನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆಗಳ ಘೋಷಣೆ ಸಾಧ್ಯತೆ ಇದೆ.