ನ್ಯೂಸ್

ರಾಜ್ಯ ಬಜೆಟ್​ 2023: ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನದ ಮೊತ್ತ ಹೀಗಿದೆ…

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರಸಕ್ತ ಸರ್ಕಾರದ ಕೊನೆಯ ಹಾಗೂ ತಮ್ಮ ಎರಡನೇ ಬಜೆಟ್​ ಮಂಡನೆ ಮಾಡುತ್ತಿದ್ದು, ವಿವಿಧ ಇಲಾಖೆಗಳಿಗೆ ಬಜೆಟ್​ನಲ್ಲಿ ಹಂಚಿಕೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ.

ಇಲಾಖೆವಾರು ಅನುದಾನ ಹಂಚಿಕೆ

* ವಸತಿ ಇಲಾಖೆ- 3787.01 ಕೋಟಿ ರೂ.

* ಆಹಾರ ಮತ್ತು ನಾಗರಿಕ ಸರಬರಾಜು - 4,608 ಕೋಟಿ ರೂ.

* ಮಹಿಳಾ ಮತ್ತು ಮಕ್ಕಳ ಕಲ್ಯಾಣ- 5,676 ಕೋಟಿ ರೂ.

* ಕೃಷಿ ಮತ್ತು ತೋಟಗಾರಿಕೆ- 9,456 ಕೋಟಿ ರೂ.

* ಲೋಕೋಪಯೋಗಿ ಇಲಾಖೆ - 10,741 ಕೋಟಿ ರೂ.

* ಸಮಾಜಕಲ್ಯಾಣ ಇಲಾಖೆ - 11,163 ಕೋಟಿ ರೂ.

* ಇಂಧನ ಇಲಾಖೆ - 13,803 ಕೋಟಿ ರೂ.

* ಒಳಾಡಳಿತ ಮತ್ತು ಸಾರಿಗೆ - 14,509 ಕೋಟಿ ರೂ.

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ 15,151 ಕೋಟಿ ರೂ.

* ಕಂದಾಯ ಇಲಾಖೆ - 15,943 ಕೋಟಿ ರೂ.

* ನಗರಾಭಿವೃದ್ಧಿ ಇಲಾಖೆ - ‌17,938 ಕೋಟಿ ರೂ.

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 20,494 ಕೋಟಿ ರೂ.

* ಜಲಸಂಪನ್ಮೂಲ ಇಲಾಖೆ - 22,854 ಕೋಟಿ ರೂ.

* ಶಿಕ್ಷಣ ಇಲಾಖೆ - 37,960 ಕೋಟಿ ರೂ.

ಇತರೆ -‌ 1,16,968 ಕೋಟಿ‌ ರೂ.

ಈ ಬಾರಿಯ ಬಜೆಟ್​ ಗಾತ್ರ ಒಟ್ಟು 3 ಲಕ್ಷ 9 ಸಾವಿರ 182 ಕೋಟಿ ರೂ. ಆಗಿದೆ.