ಆಂಧ್ರಪ್ರದೇಶ: ಪ್ಯಾನ್ ಇಂಡಿಯಾ 'ಸಲಾರ್' ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮುವ ಮುಖೇನ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಈ ಚಿತ್ರದಲ್ಲಿನ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಭಾಸ್ ಫ್ಯಾನ್ಸ್, ಇದೀಗ ಅವರ ಮುಂದಿನ ಸೈನ್ಸ್-ಫಿಕ್ಷನ್ ಜಾನರ್ ಒಳಗೊಂಡ 'ಕಲ್ಕಿ 2898 AD' ಚಿತ್ರದ ಬಿಡುಗಡೆಗೆ ಸದ್ಯ ಕಾದು ಕುಳಿತಿದ್ದಾರೆ.
ಟಾಲಿವುಡ್ನ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಹಾಗೂ ನಾಗ್ ಆಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ಗಾಗಿ ನಿರೀಕ್ಷಿಸುತ್ತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಇದೀಗ ಹೊಸ ಮಾಹಿತಿಯೊಂದು ಲಭಿಸಿದೆ. ಇತ್ತೀಚಿನ ಸಿನಿ ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಹೈದ್ರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರದ ಪ್ರಮುಖ ಶೆಡ್ಯೂಲ್ ನಡೆಯುತ್ತಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರ ಪಾತ್ರಗಳ ಚಿತ್ರೀಕರಣವನ್ನು ಈ ತಿಂಗಳ 12ರಿಂದ ಚಿತ್ರತಂಡ ಪ್ರಾರಂಭಿಸಲಿದೆ.
ಇದರೊಟ್ಟಿಗೆ ಮತ್ತೊಂದು ಸುದ್ದಿಯೊಂದು ಕೇಳಿಬಂದಿದ್ದು, ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ 'ಹಾಯ್ ನನ್ನಾ' ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಸದ್ಯ ಮೃಣಾಲ್ ಹೊರತುಪಡಿಸಿ ಬೇರೆ ಯಾರನ್ನು ಚಿತ್ರತಂಡ ಕೇಳಿಲ್ಲ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಏನು ಹೇಳಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).